ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆಂಗಳೂರಿನಲ್ಲಿ ಎಎಕ್ಸ್‌ಆರ್ ಪ್ರಾಪರ್ಟಿಸ್‌ನಿಂದ 'ಬೊಟಿಕ್ ಗೃಹಗಳ' ನಿರ್ಮಾಣ

Lingaraj Badiger
Updated On : 1 Apr 2014, 2:08 am

ಬೆಂಗಳೂರು: ಬೆಂಗಳೂರಿನಲ್ಲಿ ಎಎಕ್ಸ್‌ಆರ್ ಪ್ರಾಪರ್ಟಿಸ್ ಅತ್ಯಾಧುನಿಕ ಹಾಗೂ ಆಕರ್ಷಕ ವಿನ್ಯಾಸಗಳುಳ್ಳ 'ಬೊಟಿಕ್ ಗೃಹ'ಗಳನ್ನು ಪರಿಚಯಿಸಿದ್ದು, ಆಧುನಿಕತೆಯೊಂದಿಗೆ ಹಳೆಯ ಕಾಲದ ಸೊಬಗು ಹೊಂದಿರುವ ಈ ವಿಭಿನ್ನ 'ಬೊಟಿಕ್‌' ಐಷರಾಮಿ ಮನೆಗಳು ನೋಡಲು ಆಕರ್ಷಕವಾಗಿವೆ.

ಬೊಟಿಕ್ ಐಷಾರಾಮಿ ಮನೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಎಎಕ್ಸ್‌ಆರ್ ಪ್ರಾಪರ್ಟಿಸ್‌ನ ನಿರ್ದೇಶಕ ದಿನೇಶ್ ಜೈನ್ ಅವರು, ಬೆಂಗಳೂರಿಗರಿಗೆ ಅತ್ಯಾಧುನಿಕ ಹಾಗೂ ಸಾಟಿಯಿಲ್ಲದ ಮನೆಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಯಲ್ಲಿ ನಿರ್ಮಿಸಿರುವ ಪ್ರತಿಯೊಂದು ಮನೆಯು ಐಷರಾಮಿ ಹಾಗೂ ಆಧುನಿಕತೆಯನ್ನು ಹೊಂದಿದ್ದು, ಅತ್ಯುನ್ನತ ಜೀವನ ಶೈಲಿಯನ್ನು ಬಯಸುವ ಗ್ರಾಹಕರಿಗೆ ಇವು ಒಪ್ಪಿಗೆಯಾಗುತ್ತವೆ ಎಂದರು.

ಈ ವೇಳೆ ವಿನ್ಯಾಸಗಾರ್ತಿ ಅನಿತಾ ಪಠಾಣಿಯ ಅವರ ಮಾರ್ಗದರ್ಶಿನದಡಿ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು. ಇದು ಪುರಾತನ ಗ್ರೀಕ್ ಹಾಗೂ ಭವಿಷ್ಯದ ಆಧುನಿಕತೆಯ ಸಮ್ಮಿಲನದಂತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement