ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಗೆ ವಾಕ್ಚಾತುರ್ಯವಿಲ್ಲ, ಆದರೆ ಪ್ರಖ್ಯಾತಿ ಇದೆ: ಉಮಾ ಭಾರತಿ

ಭಾರತೀಯ ಜನತಾ ಪಕ್ಷದ ಪ್ರಧಾನಿ...

Mainashree
Updated On : 1 Apr 2014, 12:56 pm

ಜಾನ್ಸಿ: ಭಾರತೀಯ ಜನತಾ ಪಕ್ಷದ(ಬಿಜೆಪಿ) ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ವಾಕ್ಚಾತುರ್ಯವಿಲ್ಲ. ಆದರೆ ಪ್ರಖ್ಯಾತಿ ಇದೆ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಮೋದಿಗೆ ಬೆಂಬಲಿಸಲೆಂದು ಜನತೆ ರ್ಯಾಲಿಯಲ್ಲಿ ಭಾಗವಹಿಸುತ್ತಾರೆ ಹೊರತು, ಮೋದಿ ಭಾಷಣ ಕೇಳಲು ಅಲ್ಲ. ಈವರೆಗೆ ಯಾವುದೇ ಬೆಂಬಲಿಗರು ಸರಿಯಾಗಿ ಮೋದಿ ಭಾಷಣವನ್ನು ಕೇಳೇ ಇಲ್ಲ ಎಂದು ನಿನ್ನೆ ಉಮಾ ಭಾರತೀ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇಂದು ಹೇಳಿಕೆಯನ್ನು ಸ್ವಲ್ಪ ತಿರುಚಿದ ಉಮಾ, ಮೋದಿಗೆ ಭಾಷಣ ಮಾಡಲು ಬರುವುದಿಲ್ಲ, ಆದರೆ ಪ್ರಖ್ಯಾತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷ ಉತ್ತಮ ವಾಕ್ಚತುರ ಅಟಲ್ ಬಿಹಾರಿ ವಾಜಪೇಯಿ ಮಾತ್ರ. ಭಾರತ ರಾಜಕೀಯದಲ್ಲಿ ವಾಜಪೇಯಿ ವಾಕ್ಚಾತುರ್ಯವನ್ನು ಮೀರಿಸುವರು ಯಾರು ಇಲ್ಲ ಎಂದಿದ್ದ ಉಮಾ, ವಾಜಪೇಯಿ ವಾಕ್ಚಾತುರ್ಯ ಬಲ್ಲವರು, ಮೋದಿ ಪ್ರಖ್ಯಾತಿ ವ್ಯಕ್ತಿ. ನಾನು ನೀಡಿರುವ ಹೇಳಿಕೆ ಸರಿಯಾಗಿದೆ. ಅದರಿಂದ ನಾನು ಹಿಂದೆ ಸರಿಯುವುದಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಜಾನ್ಸಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಉಮಾ, ನೀವ್ಯಾರಾದರೂ ಮೋದಿ ಭಾಷಣ ಕೇಳಿದ್ದೀರಾ? ಮೋದಿಗೆ ಸರಿಯಾಗಿ ಭಾಷಣ ಮಾಡಲು ಬರುವುದಿಲ್ಲ. ಭಾಷಣ ಮಾಡುವುದರಲ್ಲಿ ವಾಜಪೇಯಿ ಉತ್ತಮ. ಮೋದಿ ರ್ಯಾಲಿಗೆ ನೆರೆಯುವ ಜನ ಕೇವಲ ಬೆಂಬಲ ಸೂಚಿಸುತ್ತಾರೆ ಹೊರತು, ಮೋದಿ ಹೇಳುವ ಕಡೆ ಗಮನ ಹರಿಸುವುದಿಲ್ಲ. ಏಕೆಂದರೆ ಅವರಿಗೆ ಮೋದಿ ಭಾಷಣ ಮುಖ್ಯವಲ್ಲ, ಬೆಂಬಲ ಸೂಚಿಸುವುದು ಮುಖ್ಯ ಎಂದು ಅವರು ತಿಳಿಸಿದ್ದರು.

ಅಮೇತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಉಮಾ ಭಾರತಿ ಈ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement