ಮುಲಾಯಂ ಮುಸ್ಲಿಂರನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾರೆಯೇ?: ಶಹನವಾಜ್
ಸಮಾಜವಾದಿ ಪಕ್ಷದ ವಿರುದ್ಧ..
ನವದೆಹಲಿ: ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್, ಸಮಾಜವಾದಿ ನೇತಾರ ಮುಲಾಯಂ ಸಿಂಗ್ ಯಾದವ್ ಮುಸ್ಲಿಂರ ಪಾಲಿಗೆ ಪೋಪ್ ಆಗಿದ್ದಾರೆಯೆ? ಎಂದು ಕೇಳಿದ್ದಾರೆ.
ಸಮಾಜವಾದಿ ಪಕ್ಷದ ನೇತಾರ ಅಬು ಅಸೀಮ್ ಆಜ್ಮೀ ಸಮಾಜವಾದಿ ಪಕ್ಷಕ್ಕೆ ಮತ ನೀಡದೇ ಇರುವ ಮುಸ್ಲಿಂರು ನಿಜವಾದ ಮುಸ್ಲಿಂರಲ್ಲ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಹುಸೇನ್, ಮುಲಾಯಂ ಮುಸ್ಲಿಂರನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾರೆಯೇ? ಎಂದಿದ್ದಾರೆ.
ಗುರುವಾರ ಖಾಲಿಬಾದ್ನಲ್ಲಿ ನಡೆದ ಸಮಾಜವಾದಿ ಪಕ್ಷದ ಅಭ್ಯರ್ಥಿ ಬಾಲಚಂದ್ರ ಯಾದವ್ ಅವರ ರ್ಯಾಲಿಯಲ್ಲಿ ಮಾತನಾಡಿದ ಅಜ್ಮಿ, ಸಮಾಜವಾದಿ ಪಕ್ಷಕ್ಕೆ ಮತದಾನ ಮಾಡದೇ ಇರುವವರು ಮತ್ತು ಪಕ್ಷದ ವಿರುದ್ಧ ಮಾತನಾಡುವವರು ಮುಸ್ಲೀಮರೇ ಅಲ್ಲ. ಅವರ ಡಿಎನ್ಎ ಟೆಸ್ಟ್ ಮಾಡಿಸಬೇಕು. ಅಂಥವರು ಆರೆಸ್ಸೆಸ್ಸ್ನಿಂದ ಬಂದವರೇ ಎಂದು ನೋಡಬೇಕು ಎಂದು ಹೇಳಿದ್ದರು.
ನಾನು ಹೇಳುವುದೇನೆಂದರೆ ಎಸ್ಪಿಗೆ ಮತ ಹಾಕದವರು ನಿಜವಾದ ವ್ಯಕ್ತಿಗಳಾಗಿರಲ್ಲ. ಮುಸ್ಲಿಂರಿಗೆ ಮುಲಾಯಂ ಸಿಂಗ್ ಏನೆಲ್ಲಾ ಮಾಡಿದ್ದಾರೆ ಎಂದು ಮುಲಾಯಂ ಸಿಂಗ್ ಅವರನ್ನು ಹೊಗಳಿದ್ದು, ಈ ಹೇಳಿಕೆಗಳು ವಿವಾದ ಸೃಷ್ಟಿಸಿವೆ.