ಮೋದಿ ಅಂದ್ರೆ 'Model of Dividing India': ಸಿಬಲ್
ಮೋದಿ ಅಂದರೆ ಭಾರತವನ್ನು ವಿಭಜಿಸುವವರು ('Model of Dividing India')ಎಂದು ಹೇಳುವ ಮೂಲಕ ಕೇಂದ್ರ ಸಚಿವ ಕಪಿಲ್ ಸಿಬಲ್ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಮೋದಿ ಅಂದರೆ ಭಾರತವನ್ನು ವಿಭಜಿಸುವವರು ('Model of Dividing India') ಎಂದು ಹೇಳುವ ಮೂಲಕ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಕೋಮುವಾದವನ್ನು ಪಸರಿಸುತ್ತಿದ್ದಾರೆ ಎಂದು ಸಿಬಲ್ ಆರೋಪಿಸಿದ್ದಾರೆ.
ಅದೇ ವೇಳೆ ಉಗ್ರರ ದಾಳಿ ನಡೆದ ಅಸ್ಸಾಂನಲ್ಲಿ ಬಿಜೆಪಿ ನಾಯಕರು ಸಂಘರ್ಷವನ್ನುಂಟುಮಾಡುತ್ತಿದ್ದಾರೆ ಎಂಬುದಾಗಿಯೂ ಸಿಬಲ್ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಪಂಜಾಬ್ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ನರೇಂದ್ರ ಮೋದಿ ಎಬಿಸಿಡಿಯನ್ನು ಕಾಂಗ್ರೆಸ್ನ ಭ್ರಷ್ಟಾಚಾರಕ್ಕೆ ಹೋಲಿಸಬಹುದು. ಅದೇನೆಂದರೆ ಎ ಫಾರ್ ಆದರ್ಶ ಹಗರಣ, ಬಿ ಫಾರ್ ಬೋಪೋರ್ಸ್ ಎಂದು ಲೇವಡಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಬಲ್ ಮೋದಿ ಅಂದರೆ ದೇಶವನ್ನು ವಿಭಜಿಸುವವ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.