ಮುಂಬೈ ಬಳಿ ಹಳಿ ತಪ್ಪಿದ ರೈಲು; 12 ಸಾವು
ಮಹಾರಾಷ್ಟ್ರದ ರೋಹಾ ಬಳಿ ಭಾನುವಾರ ಬೆಳಗ್ಗೆ 9.30ರ ವೇಳೆ ದಿಹಾ-ಸಾವಂತವಾಡಿ ಎಕ್ಸ್ಪ್ರೆಸ್ ...
ಮುಂಬೈ: ಮಹಾರಾಷ್ಟ್ರದ ರೋಹಾ ಬಳಿ ಭಾನುವಾರ ಬೆಳಗ್ಗೆ 9.30ರ ವೇಳೆ ದಿಹಾ-ಸಾವಂತವಾಡಿ ಎಕ್ಸ್ಪ್ರೆಸ್ ಹಳಿ ತಪ್ಪಿದ್ದು, 12 ಮಂದಿ ಪ್ರಯಾಣಿಕರು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ದಿವಾ-ಸಾವಂತವಾಡಿ ಪಾಸೆಂಜರ್ ರೈಲು ಎಂಜಿನ್ ಸಮೇತ ನಾಲ್ಕು ಬೋಗಿಗಳು ಸಂಪೂರ್ಣ ಹಳಿ ತಪ್ಪಿದ್ದು, 20ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹಳಿ ತಪ್ಪಿದ ಬೋಗಿಗಳಿಂದ ಮೃತದೇಹಗಳನ್ನು ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ರೈಲ್ವೇಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಘಟನೆಯಿಂದಾಗಿ ಪ್ರಸ್ತುತ ದಾರಿಯಲ್ಲಿ ಸಾಗುವ ಎಲ್ಲ ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ