ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆಂಗಳೂರಿಗೂ ಬಂತು 'ಮಸ್ತಿ 7ಡಿ' ಥಿಯೇಟರ್

Lingaraj Badiger
Updated On : 5 May 2014, 3:22 am

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಮಲ್ಟಿ ಡೈಮನ್ಸನ್ ಥಿಯೇಟರ್ 'ಮಸ್ತಿ 7ಡಿ'ಯನ್ನು ಆರಂಭಿಸಲಾಗಿದೆ.

3ಡಿ ತಂತ್ರಜ್ಞಾನದಲ್ಲಿ, ಕಣ್ಣಿಗೆ ದೃಶ್ಯಗಳು ರೋಚಕವಾಗಿ ಕಂಡರೆ, '7ಡಿ' ತಂತ್ರಜ್ಞಾನ ತನ್ನ ವಿಭಿನ್ನ ಚಲನಾ ಹಾಗೂ ಪರಿಸರೀಯ ಪರಿಣಾಮಗಳೊಂದಿಗೆ ನೋಡುಗರಿಗೆ 'ವರ್ಚ್ಯುಯಲ್ ರಿಯಾಲ್ಟಿ'ಯ ಅನುಭವವನ್ನು ಒದಗಿಸುತ್ತದೆ. ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರು ತಾವೂ ಸಹ ಆ ಚಿತ್ರದ ಭಾಗವಾಗಿದ್ದರು ಎಂಬ ಭಾವನೆಯನ್ನು ನೀಡುತ್ತದೆ.

ಈ ಅತ್ಯಾಧುನಿಕ ಅಮ್ಯೂಸ್ಮೆಂಟ್ ಹಾಗೂ ಮರುವ್ಯಾಖ್ಯಾನಿತ ಸಿನಿಮಾ ಥಿಯೇಟರ್ನಲ್ಲಿ 15-20 ನಿಮಿಷಗಳ ಅವಧಿಯ ಆ್ಯನಿಮೇಟೆಡ್ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಈ ಥಿಯೇಟರ್ನಲ್ಲಿ ವಿಶೇಷ ಕುರ್ಚಿಗಳನ್ನು ಅಳವಡಿಸಲಾಗಿದ್ದು, ಈ ಕುರ್ಚಿಗಳು ಮೂರು ಡಿಗ್ರಿಗಳಲ್ಲಿ ಚಲಿಸುತ್ತದೆ. ಈ ಮೂಲಕ ಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರು ತಾವೂ ಸಹ ಆ ಚಿತ್ರದಲ್ಲಿದ್ದಾರೆ ಎನಿಸುವಂತಹ ಭಾವನೆ ಉಂಟಾಗುತ್ತದೆ. ಜೊತೆಗೆ ಪ್ರತಿ ಸೀಟಿನ ಬಳಿಯೂ ಪ್ರತ್ಯೇಕ ಧ್ವನಿವರ್ಧಕಗಳಿದ್ದು, ಚಿತ್ರದಲ್ಲಿ ಮೂಡುವಂತಹ 'ವಾಟರ್ ಸ್ಪ್ರೇ', 'ಏರ್ ಬ್ಲಾಸ್ಟ್ಗಳು' ಅತ್ಯಂತ ಸ್ವಾಭಾವಿಕವಾಗಿ ಕಂಡು ಬರುತ್ತದೆ.

ಈ ವಿಭಿನ್ನ 'ಮಸ್ತೀ 7ಡಿ' ಇನ್ನೂ ಹಲವು ರೋಚಕತೆಗಳನ್ನು ಹೊಂದಿವೆ. ಚಿತ್ರದಲ್ಲಿ ಮೂಡಿ ಬರುವ ಹೊಗೆ, ಇಬ್ಬನಿ, ನೀರಿನ ಗುಳ್ಳೆಗಳು, ಮಳೆ, ಸಿಡಿಲು, ಮಿಂಚಿನ ಕ್ಷಣಗಳು, ಮಂಜು, ಇತ್ಯಾದಿಗಳು ಅತ್ಯಂತ ಸ್ವಾಭಾವಿಕ ಅನುಭವವನ್ನು ನೀಡುತ್ತದೆ. ಫೋರಂ ವ್ಯಾಲ್ಯೂ ಮಾಲ್ ನಿಮ್ಮೆಲ್ಲರನ್ನೂ ಈ ವಿಶಿಷ್ಟ ಅನುಭವವನ್ನು ಪಡೆದು ಬೇರೆ ಲೋಕಕ್ಕೆ ಹೋಗಿ ಬರುವ ಅನುಭವವನ್ನು ಪಡೆಯಲು ಆಹ್ವಾನಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement