ಮೇ.11 ರಂದು ಆಲೂರರ ನಾಲ್ಕು ಕೃತಿ ಬಿಡುಗಡೆ
ಖ್ಯಾತ ಸಾಹಿತಿ ಚಂದ್ರಶೇಖರ ಆಲೂರು ಅವರ ನಾಲ್ಕು ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ. ಚಾಮರಾಜಪೇಟೆಯಲ್ಲಿರುವ...
ಬೆಂಗಳೂರು: ಖ್ಯಾತ ಸಾಹಿತಿ ಚಂದ್ರಶೇಖರ ಆಲೂರು ಅವರ ನಾಲ್ಕು ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ. ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೇ 11 (ಭಾನುವಾರ) 10.30ಕ್ಕೆ ಡಾ. ಹೆಚ್ಎಸ್ ವೆಂಕಟೇಶ ಮೂರ್ತಿ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರು ಅಧ್ಯಕ್ಷತೆ ವಹಿಸಲಿದ್ದು, ಸತ್ಯಮೂರ್ತಿ ಆನಂದೂರು ಕೃತಿಗಳ ಬಗ್ಗೆ ಮಾತನಾಡಲಿದ್ದಾರೆ.
ಬಿಡುಗಡೆಯಾಗಲಿರುವ ಆಲೂರರ ಕೃತಿಗಳು
ಔಟರ್ ಸಿಗ್ನಲ್- ಪ್ರಬಂದ ಸಂಕಲನ
ಲಕ್ನೋ ಡೈರಿ -ಪ್ರವಾಸ ಕಥನ
ಹೀಗೊಂದು ದಾಂಪತ್ಯ-ಅನುವಾದ
ಅಕ್ಷರ ಆಟಾಟೋಪ- ಅಂಕಣ ಬರಹಗಳು
ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿ ಭ್ರಮೆ ತಂಡದ ಗಾಯಕಿ ಸ್ಪರ್ಶ ಅವರಿಂದ ಭಾವಗೀತೆ ಗಾಯನ ನಡೆಯಲಿದೆ.