8ನೇ ಹಂತ: 7 ರಾಜ್ಯಗಳ 64 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ
ನವದೆಹಲಿ: ಲೋಕಸಭಾ ಚುನಾವಣೆ ಕೊನೆಯ ಹಂತಕ್ಕೆ ಬಂದಿದ್ದು, ಇಂದು ಎಂಟನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 64 ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಸೀಮಾಂಧ್ರದ 175 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ.
ಎಂಟನೇ ಹಂತದ ಮತದಾನ ಉತ್ತರಪ್ರದೇಶ ಹಿಮಾಚಲ ಪ್ರದೇಶ, ಉತ್ತರಾಖಂಡ್, ಸೀಮಾಂಧ್ರ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಮಟಗಟ್ಟೆಗಳ ಬಳಿ ಜಮಾಹಿಸಿರುವುದು ಸಾಮಾನ್ಯವಾಗಿತ್ತು.
ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟು 997 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ 6, ಉತ್ತರಖಂಡ್ 5, ಹಿಮಾಚಲ ಪ್ರದೇಶದ 4, ಉತ್ತರಪ್ರದೇಶ 80, ಬಿಹಾರದ 40 ಆಂಧ್ರಪ್ರದೇಶ 42 ಹಾಗೂ ಪಶ್ಚಿಮ ಬಂಗಾಳದ 42 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
5 ಗಂಟೆಯವರೆಗಿನ ಶೇಕಡವಾರು ಮತದಾನ
ಪಶ್ಚಿಮ ಬಂಗಾಳ - ಶೇ. 57.50 ರಷ್ಟು ಮತದಾನ
ಜಮ್ಮು ಮತ್ತು ಕಾಶ್ಮೀರ - 23.61 ರಷ್ಟು ಮತದಾನ
ಉತ್ತರಖಂಡ್ - 73.97 ರಷ್ಟು ಮತದಾನ
ಹಿಮಾಚಲ ಪ್ರದೇಶದ - 25 ರಷ್ಟು ಮತದಾನ
ಉತ್ತರಪ್ರದೇಶ - 57.50 ರಷ್ಟು ಮತದಾನ
ಬಿಹಾರದ - 53 ರಷ್ಟು ಮತದಾನ
ಆಂಧ್ರಪ್ರದೇಶ - 71 ರಷ್ಟು ಮತದಾನ
ಕಣದಲ್ಲಿರುವ ಪ್ರಮುಖರು:
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಅಮೇಥಿ), ಬಿಜೆಪಿಯಿಂದ ಸ್ಮೃತಿ ಇರಾನಿ (ಅಮೇಥಿ), ಎಎಪಿಯಿಂದ ಕುಮಾರ್ ವಿಶ್ವಾಸ್ (ಅಮೇಥಿ), ವರುಣ್ ಗಾಂಧಿ (ಸುಲ್ತಾನ್‌ಪುರ), ಬೇಣಿ ಪ್ರಸಾದ್ ವರ್ಮಾ (ಗೊಂಡಾ), ಮೊಹಮ್ಮದ್ ಕೈಫ್ (ಫೂಲ್‌ಪುರ್), ರಾಮ್ ವಿಲಾಸ್ ಪಾಸ್ವಾನ್ (ಹಾಜೀಪುರ), ರಾಬ್ರಿ ದೇವಿ ಮತ್ತು ರಾಜೀವ್ ಪ್ರತಾಪ್ ರೂಡಿ (ಸಾರನ್), ಅನುರಾಗ್ ಠಾಕೂರ್ (ಹಮೀರ್‌ಪುರ್) ಸೇರಿದಂತೆ 897 ಅಭ್ಯರ್ಥಿಗಳು ಕಣದಲ್ಲಿದ್ದಾರೆ.