ಅಮೇಥಿ ತೊರೆಯುವಂತೆ ಪ್ರಿಯಾಂಕಾ ಕಾರ್ಯದರ್ಶಿಗೆ ಆಯೋಗ ಆದೇಶ
ಅಮೇಥಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ...
ಲಖನೌ: ಅಮೇಥಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಮತಗಟ್ಟೆಯೊಂದರ ಬಳಿ ಉಪಸ್ಥಿತರಿದ್ದ ಪ್ರಿಯಾಂಕಾ ಗಾಂಧಿ ಅವರ ಕಾರ್ಯದರ್ಶಿ ಪ್ರೀತಿ ಸಹಾಯ್ ಅವರಿಗೆ ಕೂಡಲೇ ಅಮೇಥಿ ತೊರೆಯುವಂತೆ ಚುನಾವಣಾ ಆಯೋಗ ಬುಧವಾರ ಆದೇಶಿಸಿದೆ.
ಇಂದು ದೇಶವ್ಯಾಪ್ತಿ 8ನೇ ಹಂತದ ಚುನಾವಣೆ ನಡೆಯುತ್ತಿದೆ. ಅಮೇಥಿ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಕಾರ್ಯದರ್ಶಿ ಮತಗಟ್ಟೆಯೊಂದರ ಬಳಿ ಉಪಸ್ಥಿತರಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಪ್ರೀತಿ ಸಹಾಯ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರೀತಿ ಸಹಾಯ್ ಅವರು ಅಮೇಠಿ ಕ್ಷೇತ್ರದಲ್ಲಿ ಉಪಸ್ಥಿತರಿದ್ದು, ಮತದಾರರನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿ ಇರಾನಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ದೂರು ನೀಡಿದರು. ಈ ದೂರನ್ನು ಪರಿಗಣಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟರು ಪ್ರೀತಿ ಸಹಾಯ್ ಅವನ್ನು ಒಡನೆಯೇ ಅಮೇಥಿ ಬಿಟ್ಟು ಹೋಗುವಂತೆ ಆದೇಶಿಸಿದರು. ಮ್ಯಾಜಿಸ್ಟ್ರೇಟರ ಆದೇಶದಿಂದ ಸಿಡಿಮಿಡಿಗೊಂಡ ಪ್ರೀತಿ ಸಹಾಯ್ ಅವರು ಕೊನೆಗೂ ಸಿಟ್ಟಿನ ಭರದಲ್ಲಿ ಮತಗಟ್ಟೆಯಿಂದ ಹೊರನಡೆದರು.