ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಂಧ್ರ: ಮಾವೋ ನಕ್ಸಲ್ ದಾಳಿ, 2 ಇವಿಎಂ ಕಳವು

Vishwanath S
Updated On : 7 May 2014, 4:09 am

ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ಮತದಾನದ ವೇಳೆ ಎರಡು ಮತಗಟ್ಟೆಗಳ ಮೇಲೆ ದಾಳಿ ಮಾಡಿರುವ ಮಾವೋ ನಕ್ಸಲರು ಎರಡು ಮತಯಂತ್ರಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ.

8ನೇ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶದ ಒಟ್ಟು 42 ಲೋಕಸಭೆ ಸೇರಿದಂತೆ ಸೀಮಾಂಧ್ರದ 175 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯುತ್ತಿದೆ. ವಿಶಾಖಪಟ್ಟಂನ ಕೊಯ್ಯುರು ಅರಣ್ಯ ಪ್ರದೇಶದ ಪಲಕಜೀಡಿ ಮತಗಟ್ಟೆ ಮೇಲೆ ಇಂದು ನಕ್ಸಲರು ದಾಳಿ ಮಾಡಿದ್ದಾರೆ. ಈ ವೇಳೆ ಎರಡು ಇವಿಎಂ ಯಂತ್ರಗಳನ್ನು ನಕ್ಸಲರು ಕೊಂಡೊಯ್ದಿದ್ದು ಅಲ್ಲದೆ ಚುನಾವಣಾಧಿಕಾರಿಗಳಿಗೆ ಸೇರಿದ ಜೀಪ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಆಂಧ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಶೇ. 52 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement