ವಾರಾಣಾಸಿಯಲ್ಲಿ ಮೋದಿ ಪ್ರಚಾರಕ್ಕೆ ಅನುಮತಿ ನೀಡದ ಅಧಿಕಾರಿಗಳು
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಳೆ ವಾರಣಾಸಿಯಲ್ಲಿ ನಡೆಸಬೇಕಿದ್ದ...
ವಾರಾಣಾಸಿ: ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಳೆ ವಾರಣಾಸಿಯಲ್ಲಿ ನಡೆಸಬೇಕಿದ್ದ ರ್ಯಾಲಿಗೆ ಜಿಲ್ಲಾ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಹೌದು, ನಾಳೆ ಮೋದಿ ವಾರಾಣಾಸಿಯಲ್ಲಿ ಎರಡು ರ್ಯಾಲಿ ಹಮ್ಮಿಕೊಂಡಿದ್ದರು, ಆದರೆ ಜಿಲ್ಲಾ ಅಧಿಕಾರಿಗಳು ಪ್ರಚಾರ ನಡೆಸಲು ಅನುಮತಿ ನಿರಾಕರಿಸಿದ್ದಾರೆ, ಇದರಿಂದಾಗಿ ನಾಳೆ ವಾರಾಣಾಸಿಯಲ್ಲಿ ಮೋದಿ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಜಿಲ್ಲಾಡಳಿತ ಅಧಿಕಾರಿಗಳು ಒಂದು ರ್ಯಾಲಿಯನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದ್ದು, ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ಹೊರ ಬಿದ್ದಿಲ್ಲ. ಈ ಸಂಬಂಧ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ ಮತ್ತು ಅಮಿತ್ ಶಾ ಪರ್ಯಾಯ ವ್ಯವಸ್ಥೆಗಾಗಿ ಸಭೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ವಾರಾಣಾಸಿಯಲ್ಲಿ ಮೇ 12 ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಪ್ರಪ್ರಥಮ ಬಾರಿಗೆ ಮೋದಿ ವಾರಾಣಾಸಿಯಿಂದ ಸ್ಪರ್ಧಿಸುತ್ತಿದ್ದು, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್‌ನಿಂದ ಅಜಯ್ ರಾಯ್ ಅವರನ್ನು ಎದುರಿಸಲಿದ್ದಾರೆ.