ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಟ ರಘುವೀರ್ ಅಂತ್ಯಕ್ರಿಯೆ

ತೀವ್ರ ಹೃದಯಾಘಾತದಿಂದ ನಿನ್ನೆ ಅಸುನೀಗಿದ್ದ ನಟ ರಘುವೀರ್ ಅಂತ್ಯಕ್ರಿಯೆ...

Vishwanath S
Updated On : 9 May 2014, 5:49 am

ಬೆಂಗಳೂರು: ತೀವ್ರ ಹೃದಯಾಘಾತದಿಂದ ನಿನ್ನೆ ಅಸುನೀಗಿದ್ದ ನಟ ರಘುವೀರ್ ಅಂತ್ಯಕ್ರಿಯೆ ಶುಕ್ರವಾರ ಸಂಜೆ 4ರ ಸುಮಾರಿನಲ್ಲಿ ನೇರವೇರಿಸಲಾಯಿತು.

ಅಂತ್ಯಕ್ರಿಯೆಗೂ ಮುನ್ನ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಈ ವೇಳೆ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದರು. ನಂತರ ನಗರದ ವಿಲ್ಸನ್ಗಾರ್ಡನ್ನ ರುದ್ರಭೂಮಿಯಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ರಘುವೀರ್ ಅಂತ್ಯ ಸಂಸ್ಕಾರವನ್ನು ಅವರ ಅಣ್ಣನ ಮಗ ರಘು ನೇರವೇರಿಸಿದರು.

 'ಚೈತ್ರದ ಪ್ರೇಮಾಂಜಲಿ' ಚಿತ್ರದ ನಾಯಕ ನಟ ರಘುವೀರ್ ಗುರುವಾರ ಮಧ್ಯಾಹ್ನ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಬಿಟಿಎಂ ಲೇಔಟ್‌ನ ಗಂಗೋತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಂಜೆ ವೇಳೆಗೆ ರಘುವೀರ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

1992ರಲ್ಲಿ ಬಿಡುಗಡೆಯಾದ ಎಸ್.ನಾರಾಯಣ್ ನಿರ್ದೇಶನದ ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ರಘುವೀರ್ ಕನ್ನಡ ಚಿತ್ರರಂಗದಲ್ಲಿ ಸ್ಥಾನ ಕಂಡುಕೊಂಡಿದ್ದರು. ಚಿತ್ರ ಸೂಪರ್‌ಹಿಟ್ ಆಗಿ ಕನ್ನಡಕ್ಕೊಬ್ಬ ಹೊಸ ನಾಯಕ ನಟ ಸಿಕ್ಕ ಎಂದೇ ಗಾಂಧಿನಗರ ಭಾವಿಸುವಂತಾಗಿತ್ತು. ಆ ನಂತರ ಎಸ್.ಮಹೇಂದರ್ ನಿರ್ದೇಶನದಲ್ಲಿ ಅವರು ನಟಿಸಿದ 'ಶೃಂಗಾರ ಕಾವ್ಯ' ಚಿತ್ರ ಕೂಡ ತಕ್ಕ ಮಟ್ಟಿಗಿನ ಯಶಸ್ಸು ಕಂಡಿತ್ತು.

ಆ ನಂತರದ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು ಇದರಿಂದ ಬೇಸರಗೊಂಡು ಚಿತ್ರರಂಗದಿಂದ ದೂರ ಉಳಿದಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement