ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಾರಣಾಸಿಯಲ್ಲಿ ಮೋದಿಗೆ ಸೋಲು: ಕೇಜ್ರಿವಾಲ್

Vishwanath S
Updated On : 9 May 2014, 2:58 am

ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಜನತೆ ಮತ ನೀಡುವುದಿಲ್ಲ ಎಂದು ಪ್ರತಿಸ್ಪರ್ಧಿ ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿರುವ ಕೇಜ್ರಿವಾಲ್ ಇಂದು ರಾಮನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಸಿದ್ದರು. ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ನರೇಂದ್ರ ಮೋದಿ ಸೋಲುವುದು ಖಚಿತ. ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೋದಿ ಕೇವಲ ಎರಡು ಗಂಟೆಗಳ ಕಾಲ ಸಭೆ ನಡೆಸಿ ಹೋಗುತ್ತಾರೆ ಇಂತವರು ಜನತೆಯ ಸೇವೆ ಮಾಡುತ್ತಾರೆ ಎಂಬ ಯೋಚನೆ ಜನತೆಗೆ ಬಂದಿದೆ. ಹೀಗಾಗಿ ಈ ಬಾರಿ ಬಿಜೆಪಿ ಬದಲಿಗೆ ಎಎಪಿಗೆ ಮತ ನೀಡುತ್ತಾರೆ ಎಂದರು.

ಎರಡು ಗಂಟೆಗಳ ಕಾಲ ಸಭೆ ನಡೆಸಲು ಹೆಲಿಕಾಫ್ಟರ್ ಮೂಲಕ ಬಂದು ಹೋಗುವ ಮೋದಿಗೆ ಜನರ ಕಷ್ಟಗಳು ಅರ್ಥವಾಗುತ್ತವಾ ಎಂದು ಪ್ರಶ್ನಿಸಿದ್ದಾರೆ. ಇಂತಹ ವ್ಯಕ್ತಿಗೆ ಜನತೆ ಮತ ನೀಡುವುದಿಲ್ಲ. ಹೀಗಾಗಿ ಮೋದಿ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಅವರು, ವಾರಣಾಸಿಯಲ್ಲಿ ಮೋದಿ ಯಾವುದೇ ಸಭೆ ಸಮಾರಂಭ ನಡೆಸದೆ ಇದ್ದರು ಬಿಜೆಪಿಗೆ ಮತ ನೀಡುತ್ತಾರೆ ಎಂಬ ಹೇಳಿಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ವಾರಣಾಸಿಯಲ್ಲಿ ಸಭೆ ಸಮಾರಂಭಗಳನ್ನು ನಡೆಸದೆ ಇದ್ದರು ಬಿಜೆಪಿಗೆ ಮತ ನೀಡಲು ಜನತೆಗೆ ಬುದ್ಧಿ ಇಲ್ಲವಾ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement