ಶಾರದ ಚಿಟ್ ಫಂಡ್ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ
ಕೊಲ್ಕತಾದ ಶಾರದ ಗ್ರೂಪ್ ಚಿಟ್ಫಂಡ್ ಕಂಪನಿ ಹಗರಣದ...
ಕೊಲ್ಕತಾ: ಕೊಲ್ಕತಾದ ಶಾರದ ಗ್ರೂಪ್ ಚಿಟ್ಫಂಡ್ ಕಂಪನಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
ಶಾರದ ಗ್ರೂಪ್ ಚಿಟ್ಫಂಡ್ ಕಂಪನಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ಲಕ್ಷಾಂತರ ಜನರಿಗೆ 25,000 ಕೋಟಿ ರು. ವಂಚನೆ ಮಾಡಿತ್ತು. ಈ ಹಗರಣದಲ್ಲಿ ಅನೇಕ ರಾಜಕೀಯ ಪ್ರತಿನಿಧಿಗಳ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ತನಿಖೆ ನಡೆಸಲು ಸಿಬಿಐ ಸೂಚಿಸಿದೆ.
ಇದಲ್ಲದೇ, ಒಡಿಶಾದಲ್ಲಿ ನಡೆದ ಪೋಂನ್ಜಿ ಹಗರಣದ ಬಗ್ಗೆಯು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿರುವ ಸುಪ್ರೀಂ, ಶಾರದ ಗ್ರೂಪಿನಂತಹ ನೂರೂರು ಚಿಟ್ಫಂಡ್ನಂತ ಕಂಪನಿಗಳು ನಡೆಸಿರುವ ಹಗರಣದ ಬಗ್ಗೆಯು ತನಿಖೆ ನಡೆಸಿ ಎಂದು ತಿಳಿಸಿದೆ.
ನ್ಯಾಯಾಮೂರ್ತಿ ಟಿ.ಎಸ್ ಠಾಕೂರ್ ಅವರನ್ನೊಳಗೊಂಡ ನ್ಯಾಯಾಪೀಠ ಈ ಆದೇಶ ಹೊರಡಿಸಿದೆ.