ಷೇರು ಮಾರುಕಟ್ಟೆಯಲ್ಲಿ 700 ಅಂಕ ಏರಿಕೆಯ ಸಾರ್ವಕಾಲಿಕ ದಾಖಲೆ
ಮುಂಬೈ: ಮುಂದಿನ ವಾರ ಬರಲಿರುವ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಭಾರಿ ಬದಲಾವಣೆ ಕಂಡಿದ್ದು, ಶುಕ್ರವಾರ 700 ಅಂಕಗಳನ್ನು ಗಳಿಸಿ ಸೆನ್ಸೆಕ್ಸ್ 23.048 ಅಂಕಗಳೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವ ನಿರೀಕ್ಷೆ ಷೇರು ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗೆ ಮುನ್ನುಡಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 23.048 ಅಂಕಗಳನ್ನು ಗಳಿಸಿದೆ. ಇದೇ ವೇಳೆ ನಿಫ್ಟಿ ಸಹ 6.800 ಅಂಕಗಳಿಗೆ ತಲುಪಿಸಿದೆ.
ಕಳೆದ ಐದು ವಾರಗಳಿಂದ ನಡೆಯುತ್ತಿರುವ ಲೋಕಸಭಾ ಚುನಾವಣೆ ಸೋಮವಾರ ಮುಕ್ತಾಯವಾಗಲಿದ್ದು, ಚುನಾವಣೆಯ ಫಲಿತಾಂಶಗಳು ಮೇ 16 ರಂದು ಪ್ರಟಕಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರಿಂದ ಶೇರು ಖರೀದಿ ಹೆಚ್ಚಾದ ಕಾರಣ ಷೇರು ಮಾರುಕಟ್ಟೆಯ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮುಟ್ಟಿದೆ.
ಬ್ಯಾಂಕಿಂಗ್ ಸ್ಟಾಕ್ಗಳು ಗಳಿಕೆಯಲ್ಲಿ ಮುಂದಿದ್ದು, ರಾಷ್ಟ್ರೀಯ ಸ್ಟಾಕ್ ವಿನಿಮಯ ಬ್ಯಾಂಕಿಂಗ್ ಉ ಸೂಚ್ಯಂಕ 4.4 ರಷ್ಟು ದಾಖಲೆ ಏರಿಕೆ ಕಂಡಿದೆ. ಇದರಿಂದ ಪ್ರಮುಖ ಬ್ಯಾಂಕ್ಗಳು ಬಾರಿ ಲಾಭ ಪಡೆಯಲಿವೆ. ಐಸಿಐಸಿಐ ಬ್ಯಾಂಕ್ ಸುಮಾರು ಶೇ. 6ರಷ್ಟು ಬೆಳವಣಿಗೆ ದಾಖಲಿಸಿದೆ.