ಕಾಂಗ್ರೆಸ್ನಲ್ಲಿ ಬುದ್ಧ ಸಿದ್ಧಾಂತ ಪರಿಪಾಲನೆ: ರಾಹುಲ್
ಬುದ್ಧ ಸಿದ್ಧಾತಂ ಪರಿಪಾಲನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್, ಪ್ರೀತಿ ಮತ್ತು ...
ವಾರಾಣಾಸಿ: ಬುದ್ಧ ಸಿದ್ಧಾತಂ ಪರಿಪಾಲನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್, ಪ್ರೀತಿ ಮತ್ತು ಶಾಂತಿ ಬದುಕಲು ಇಚ್ಛಿಸುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಪ್ರೀತಿ ಮತ್ತು ಶಾಂತಿ ಕಾಂಗ್ರೆಸ್ ಪಕ್ಷದ ಸಂಕೇತವಾಗಿದೆ. ಇವರೆಡನ್ನು ದೇಶದ ಜನತೆಗೆ ನಾವು ನೀಡಬೇಕಿದೆ ಎಂದು ರಾಹುಲ್ ತಿಳಿಸಿದ್ದಾರೆ.
ಇಂದು ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ ನಂತರ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಬಿಜೆಪಿಯ ಪ್ರಬಲ ವ್ಯಕ್ತಿ ನರೇಂದ್ರ ಮೋದಿ ಭಾರತೀಯ ವಾಯು ಪಡೆಗೆ ಗುಜರಾತ್ನಲ್ಲಿ ನೆಲ ನೀಡದೆ ವಂಚಿಸಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಿದೆ. ಆಹಾರ ಕಾಯ್ದೆ ಜಾರಿಗೊಳಿಸಿದೆ. ಬಡವರಿಗಾಗಿ ದುಡಿಯುತ್ತಿರುವ ಕಾಂಗ್ರೆಸ್, ಕಡಿಮೆ ರಿಯಾಯಿತಿ ದರದಲ್ಲಿ ಹಾಗೂ ಬಡವರಿಗೆ ಉಚಿತ ಔಷಧ ಪೂರೈಸಲು ಆರೋಗ್ಯ ಕಾಯ್ದೆ ಹೊರತಂದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಡೆಗಟ್ಟುವಲ್ಲಿ ಸಮಾಜವಾದಿ ಪಕ್ಷ ವಿಫಲವಾಗಿದೆ ಹಾಗೂ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತ ಔಷಧ ಪೂರೈಕೆ ಮಾಡಲಾಗುವುದು ಎಂದ ರಾಹುಲ್, ಮಹೀಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಶ್ರಮಿಸಲಿದೆ ಎಂದು ಹೇಳಿದ್ದಾರೆ.