ಯೋಧರ ಗುಂಡಿಗೆ ಉಗ್ರರಿಬ್ಬರು ಬಲಿ
ಜಮ್ಮು ಮತ್ತು ಕಾಶ್ಮೀರ: ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಪಾಕ್ ಉಗ್ರರನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧರು ಹತ್ಯೆ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ ಗಡಿ ನಿಯಂತ್ರಣ ರೇಖೆಯ ಬಳಿ ಕಳೆದ ಮಧ್ಯರಾತ್ರಿ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರ ಮೇಲೆ ಯೋಧರು ದಾಳಿ ನಡೆಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದು ಭಾರತೀಯ ಯೋಧನೊರ್ವ ಗಾಯಗೊಂಡಿದ್ದಾನೆ.
ಅಕ್ರಮವಾಗಿ ಭಾರತ ಗಡಿಯೊಳಗೆ ನುಸುಳಲು ಯತ್ನಿಸುವ ಪಾಕ್ ಉಗ್ರರ ಯತ್ನವನ್ನು ಭಾರತೀಯ ಯೋಧರು ಎರಡು ಭಾರಿ ವಿಫಲಗೊಳಿಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದ ಪೂಂಚ್ ಜಿಲ್ಲೆಯಲ್ಲಿ ಕಳೆದ ರಾತ್ರಿ ನಾಲ್ವರು ಉಗ್ರರು ಸುಳಿದಾಡುತ್ತಿದ್ದುದನ್ನು ಕಂಡ ಗಡಿ ಭದ್ರತಾ ಪಡೆಯ ಸಿಬ್ಬಂದಿ ಅವರತ್ತ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಉಗ್ರರೂ ಸಹ ಗುಂಡು ಹಾರಿಸಿದರು.
ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಾರಿಯಾಗಿರುವ ಉಗ್ರರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.