ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತ ತೆರೆ
2014ರ ಲೋಕಸಭಾ ಚುನಾವಣೆ...
ನವದೆಹಲಿ: 2014ರ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಶನಿವಾರ ಸಂಜೆ ಅಧಿಕೃತ ತೆರೆ ಬಿದ್ದಿದೆ.
ಮೂರು ರಾಜ್ಯಗಳಲ್ಲಿ ಮೇ 12ರಂದು 2014ರ ಲೋಕಸಭಾ ಚುನಾವಣೆಯ 9ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದ್ದು, ಇಂದು ಪ್ರಚಾರಕ್ಕೆ ತೆರೆ ಎಳೆಯಲಾಗಿದೆ.
3 ರಾಜ್ಯಗಳಲ್ಲಿ 41 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಹಾರ 6, ಉತ್ತರಪ್ರದೇಶ 18 ಹಾಗೂ ಪಶ್ಚಿಮ ಬಂಗಾಳದ 17 ಕ್ಷೇತ್ರಗಳಲ್ಲಿ ಮೇ 12ರಂದು ಮತದಾನ ನಡೆಯಲಿದೆ.
ಮೇ 16ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ.