ವೈದ್ಯೇ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆಗೈದ ವಾರ್ಡ್ ಬಾಯ್
ಅಸ್ಸಾಂ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಕಿರಿಯ ವೈದ್ಯೇ ಸರಿತ ತಶ್ನಿವಾಲ್ ಮೇಲೆ ಅತ್ಯಾಚರಕ್ಕೆ...
ಗೌವ್ಹಾಟಿ: ಅಸ್ಸಾಂ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಕಿರಿಯ ವೈದ್ಯೇ ಸರಿತ ತಶ್ನಿವಾಲ್ ಮೇಲೆ ಅತ್ಯಾಚರಕ್ಕೆ ಯತ್ನಿಸಿದ ವಾರ್ಡ್ಬಾಯ್ ಆಕೆಯನ್ನು ಹತ್ಯೆಗೈದಿರುವ ಘಟನೆ ಶುಕ್ರವಾರ ನಡೆದಿದೆ.
ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರಿತ ಮೇಲೆ ಅದೇ ಆಸ್ಪತ್ರೆಯ ವಾರ್ಡ್ಬಾರ್ಯ್ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿಫಲವಾದ ಹಿನ್ನಲೆಯಲ್ಲಿ ಸರ್ಜಿಕಲ್ ಕತ್ತಿಯಿಂದ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ತಿರು ಮೆಕ್ ಬಂಧಿತ ಆರೋಪಿ. ಸರಿತ ರಾತ್ರಿ ಪಾಳಿ ಮಾಡುತ್ತಿದ್ದಾಗ ತಿರು ಮೆಕ್ ಎಂಬ ವಾರ್ಡ್ ಬಾಯ್ ಯಾರು ಇಲ್ಲದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ಸರಿತಾಗೆ ಜುಲೈ 7ರಂದು ಮದುವೆ ನಿಶ್ಚಯವಾಗಿತ್ತು ಎಂದು ಮೂಲಗಳು ತಿಳಿಸಿವೆ.