ಬಾಂಬ್ ಸ್ಫೋಟಿಸಿದ ನಕ್ಸಲರು: 7 ಪೊಲೀಸರು ಸಾವು
ಗಡಚಿರೋಲಿ: ನಕ್ಸಲರು ನೆಲಬಾಂಬ್ ಸ್ಫೋಟಿಸಿದ ಪರಿಣಾಮ 7 ಪೊಲೀಸರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಬೆಳಿಗ್ಗೆ ನಡೆದಿದೆ.
ಪೊಲೀಸರು ತೆರಳುತ್ತಿದ್ದ ಜೀಪನ್ನು ಗುರಿಯಾಗಿಸಿಕೊಂಡ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ್ದಾರೆ. ಬೆಳಿಗ್ಗೆ 9.30ರಲ್ಲಿ ಘಟನೆ ಸಂಭವಸಿದ್ದು, ಜೀಪಿನಲ್ಲಿದ್ದ 7 ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರು ಗಸ್ತು ತಿರುಗಿ ಬರುತಿದ್ದಾಗ ನಕ್ಸಲರು ಈ ದಾಳಿ ನಡೆಸಿದ್ದಾರೆ.