ಕರೆಂಟ್ ಶಾಕ್: ವಿದ್ಯುತ್ ದರ ಪ್ರತಿ ಯುನಿಟ್ಗೆ 32 ಪೈಸೆ ಹೆಚ್ಚಳ
ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ವಿದ್ಯುತ್ ದರ ಪ್ರತಿ ಯುನಿಟ್ಗೆ 32 ಪೈಸೆ ಹೆಚ್ಚಳ ಮಾಡಿದೆ.
ಬೆಂಗಳೂರು: ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ವಿದ್ಯುತ್ ದರ ಪ್ರತಿ ಯುನಿಟ್ಗೆ 32 ಪೈಸೆ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಮೇ 1ರಿಂದಲೇ ಅನ್ವಯವಾಗಲಿದೆ.
ಇಂದು ಕೆಇಆರ್ಸಿ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ್ದು, ಬೆಸ್ಕಾಂ, ಮೆಸ್ಕಾಂ. ಚೆಸ್ಕಾಂ ಹಾಗೂ ಹೆಸ್ಕಾಂ ವಿಭಾಗದಲ್ಲಿ ಪ್ರತಿ ಯುನಿಟ್ಗೆ 32 ಪೈಸೆ ಏರಿಕೆ ಮಾಡಲಾಗಿದೆ.
ಪ್ರತಿ ಯೂನಿಟ್ಗೆ 65 ಪೈಸೆ ಏರಿಕೆ ಮಾಡಬೇಕೆಂದು ಎಲ್ಲ ಎಸ್ಕಾಂಗಳು ಈ ಹಿಂದೆ ಮನವಿ ಮಾಡಿದ್ದವು. ಇದನ್ನಾಧರಿಸಿ ವಿದ್ಯುತ್ ನಿಯಂತ್ರಣ ಆಯೋಗ ಜನರ ಅಭಿಪ್ರಾಯ ಸಂಗ್ರಹಿಸಿ ಪ್ರತಿ ಯೂನಿಟ್ಗೆ 32 ಪೈಸೆ ಹೆಚ್ಚಳ ಮಾಡಿದೆ.
ಕೆಇಆರ್ಸಿ ಈ ಹಿಂದೆ 2010ರಲ್ಲಿ ಪ್ರತಿ ಯುನಿಟ್ಗೆ 30 ಪೈಸೆ ಹೆಚ್ಚಳ ಮಾಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಭಾರಿ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿದೆ.