ನನ್ನ ಹೋರಾಟ ಮೋದಿ ವಿರುದ್ಧ, ಅಜಯ್ ರಾಯ್ ವಿರುದ್ಧ ಅಲ್ಲ: ಕೇಜ್ರಿವಾಲ್
ರಾಜಕೀಯ ಘಟಾನುಘಟಿಗಳು ಸ್ಪರ್ಧಿಸಿರುವ ಉತ್ತರ ಪ್ರದೇಶದ...
ವಾರಣಸಿ: ರಾಜಕೀಯ ಘಟಾನುಘಟಿಗಳು ಸ್ಪರ್ಧಿಸಿರುವ ಉತ್ತರ ಪ್ರದೇಶದ ವಾರಣಸಿಯಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧವೇ ತಮ್ಮ ನೇರ ಹೋರಾಟ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಘೋಷಿಸಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ, 40 ವರ್ಷದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ಅಜಯ್ ರಾಯ್ ತಮ್ಮ ಪ್ರತಿಸ್ಪರ್ಧಿ ಅಲ್ಲ ಎಂದು ಹೇಳಿದ್ದಾರೆ. (ವಾರಣಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ಶಾಸಕ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ.)
ಮತಗಟ್ಟೆಯ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, 'ಅದು ಹೇಗೆ ತ್ರಿಕೋನ ಸ್ಪರ್ಧೆಯಾಗುತ್ತದೆ? ಸ್ಪರ್ಧೆಯಲ್ಲಿ ಅಜಯ್ ರಾಯ್ ಇಲ್ಲವೇ ಇಲ್ಲ. ನನಗೂ ಮೋದಿಗೂ ನೇರ ಸ್ಪರ್ಧೆ ಇದೆ. ಕಳೆದ ಮೂರು ದಿನಗಳಿಂದ ಪರಿಸ್ಥಿತಿ ಬದಲಾಗಿದ್ದು, ಈಗ ಎಲ್ಲರೂ ಮೋದಿ ಸೋಲುತ್ತಾರೆ ಎನ್ನುತ್ತಿದ್ದಾರೆ' ಎಂದು ಹೇಳಿದರು.
ಈ ಮಧ್ಯೆ, ಕೇಜ್ರಿವಾಲ್ ಹೇಳಿಕೆಯನ್ನು ತಳ್ಳಿಹಾಕಿರುವ ಅಜಯ್ ರಾಯ್, ವಾರಣಸಿ ಮತದಾರರು ತಮ್ಮನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಏಕೆಂದರೆ ಅವರು ಇಬ್ಬರೂ ಹೊರಗಿನವರು. ನಾನು ಮಾತ್ರ 'ಈ ಮಣ್ಣಿನ ಮಗ' ಎಂದಿದ್ದಾರೆ.