ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಧಾನಿ ಮನಮೋಹನ್ ಸಿಂಗ್ ಬುದ್ಧಿವಂತರು: ಅರುಣ್ ಜೇಟ್ಲಿ

ಮನಮೋಹನ್ ಸಿಂಗ್ ಅವರು ಬುದ್ಧಿವಂತರು ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ..

Mainashree
Updated On : 13 May 2014, 5:38 am

ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಅವರು ಬುದ್ಧಿವಂತರು ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣೆ ಫಲಿತಾಂಶದ ನಂತರ ನಿವೃತ್ತಿಯಾಗಲಿದ್ದು, ಘನತೆ ಮತ್ತು ಪ್ರತಿಷ್ಠೆಯಿಂದ ಹೊರ ನಡೆಯಲಿದ್ದಾರೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಪ್ರಧಾನಿಯವರು ಯಾವುದೇ ವಿಷಯ ಪ್ರಸ್ತಾಪಿಸಬೇಕಾದರು, ಅದರ ಬಗ್ಗೆ ಹೆಚ್ಚಿನ ಮಟ್ಟಿಗೆ ತಿಳಿದುಕೊಳ್ಳುವುದಲ್ಲದೇ, ಸರಿಯಾದ ರೀತಿಯಲ್ಲಿ ವಿಶ್ಲೇಷಿಸುತ್ತಾರೆ ಎಂದು ಜೇಟ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒತ್ತಡ ಮನಮೋಹನ್ ಸಿಂಗ್ ಅವರ ಮೇಲಿತ್ತು. ಇಲ್ಲವಾದರೆ, ಸಿಂಗ್ ಅವರು ದೇಶ ಮೆಚ್ಚುವ ನಾಯಕರಾಗುತ್ತಿದ್ದರು. ಸೋನಿಯಾ ಗಾಂಧಿ ಅವರ ಮುಂದೆ ಮನಮೋಹನ್ ಸಿಂಗ್ ಮೌನವಹಿಸಬೇಕಿತ್ತು. ಆದರೆ ಸಿಂಗ್ ಅವರು ನಿಜವಾಗಿಯು ತಿಳಿವಳಿಕೆ ಹಾಗೂ ಸೌಮ್ಯವುಳ್ಳ ವ್ಯಕ್ತಿ ಎಂದು ಜೇಟ್ಲಿ ಶ್ಲಾಘಿಸಿದ್ದಾರೆ.

ಗೌರವ ಮತ್ತು ಪ್ರತಿಷ್ಟೆಯನ್ನು ಕಾಪಾಡಿಕೊಂಡು ಬಂದಿರುವ ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನಕ್ಕೆ ವಿದಾಯದ ಹೇಳಿದ ನಂತರವು, ಅವರ ಸಲಹೆಗಳಗೆ ನಾವು ಸ್ವಾಗತಿಸುತ್ತೇವೆ ಎಂದು ಜೇಟ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement