ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನವ ದಂಪತಿಗಳು: 88ನೇ ವಯಸ್ಸಿನಲ್ಲಿ ಮದುವೆಯಾದ ತಿವಾರಿ

ಎನ್‌ಡಿಎ ತಿವಾರಿ ತಮ್ಮ 88ನೇ ವಯಸ್ಸಿನಲ್ಲಿ ಈ ಹಿಂದೆ ತಾವು ತಿರಸ್ಕರಿಸಿದ್ದ..

Lingaraj Badiger
Updated On : 15 May 2014, 6:53 am

ಲಖನೌ: ಕಾಂಗ್ರೆಸ್ ಹಿರಿಯ ನಾಯಕ ಎನ್‌ಡಿಎ ತಿವಾರಿ ತಮ್ಮ 88ನೇ ವಯಸ್ಸಿನಲ್ಲಿ ಈ ಹಿಂದೆ ತಾವು ತಿರಸ್ಕರಿಸಿದ್ದ ಮಹಿಳೆ ಉಜ್ವಲಾ ಶರ್ಮಾ ಅವರೊಂದಿಗೆ ಗುರುವಾರ ಹಸೆಮಣೆ ಏರಿದ್ದಾರೆ. ಸುದೀರ್ಘ ಕಾನೂನು ಹೋರಾಟದ ಬಳಿಕ ಉಜ್ವಲಾ ಶರ್ಮಾ ಅವರ ಪುತ್ರನಿಗೆ ತಾನೆ ತಂದೆ ಎಂದು ತಿವಾರಿ ಒಪ್ಪಿಕೊಂಡಿದ್ದರು.

ಇಂದು ಬೆಳಗ್ಗೆ ಲಖನೌನಲ್ಲಿ ನಡೆದ ವಿವಾಹಕ್ಕೆ ಉಜ್ವಲಾ ಅವರ ಪುತ್ರ 32 ವರ್ಷದ ರೋಹಿತ್ ಶೇಖರ್ ಸಹ ಸಾಕ್ಷಿಯಾದರು.

ತನ್ನನ್ನು ಮಗನೆಂದು ಒಪ್ಪಿಕೊಳ್ಳದ ಎನ್ಡಿ ತಿವಾರಿ ವಿರುದ್ಧ ರೋಹಿತ್ 2008ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಡಿಎನ್ಎ ಪರೀಕ್ಷೆಯಲ್ಲಿ ತಿವಾರಿಯವರು ರೋಹಿತ್ಗೆ ಜೈವಿಕ ತಂದೆ ಎಂಬುದು ಸಾಬೀತಾಗಿತ್ತು. ಬಳಿಕ ಕಳೆದ ಮಾರ್ಚ್ನಲ್ಲಿ ರೋಹಿತ್ ತನ್ನ ಪುತ್ರ ಎಂದು ತಿವಾರಿ ಬಹಿರಂಗವಾಗಿ ಒಪ್ಪಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement