ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿಕ್ಕೋಡಿಯಲ್ಲಿ ಸಚಿವ ಪ್ರಕಾಶ್ ಹುಕ್ಕೇರಿಗೆ ಗೆಲುವು

Lingaraj Badiger
Updated On : 16 May 2014, 5:04 am

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ರಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಗೆಲುವು ಸಾಧಿಸಿದ್ದಾರೆ.

ಗೆದ್ದ ಅಭ್ಯರ್ಥಿ ಹೆಸರು:- ಪ್ರಕಾಶ ಬಾಬಣ್ಣ ಹುಕ್ಕೇರಿ
ಪಡೆದ ಮತಗಳು-474373
ಗೆಲುವಿನ ಅಂತರ:-3003
ಹಿಂದಿನ ಸಂಸದರು- ರಮೇಶ ಕತ್ತಿ

4) ಹೊಸ ಸಂಸದರ ಕಿರು ಪರಿಚಯ
ಕುಟುಂಬದ ವಿವರ- ಕೃಷಿ, ರಾಜಕಾರಣ
ಪತಿ- ನೀಲಾಂಬಿಕಾ, ಓರ್ವ ಪುತ್ರ (ಗಣೇಶ ಹುಕ್ಕೇರಿ, ಜಿ.ಪಂ. ಸದಸ್ಯ)
ವಿದ್ಯಾರ್ಹತೆ- ಎಸ್ಸೆಸ್ಸೆಲ್ಸಿ
ರಾಜಕೀಯ ಅನುಭವ- ಸದಲಗಾ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ ಚಿಕ್ಕೋಡಿ ಕ್ಷೇತ್ರದಿಂದ ಮತ್ತೆ ಪುನರಾಯ್ಕೆ, ಎರಡು ಬಾರಿ ಸಚಿವ, ವಿಧಾನ ಪರಿಷತ್ತಿಗೆ ಆಯ್ಕೆ ು.

ಮೂಲತಃ ಎಲ್ಲಿಯವರು:- ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದವರು
ಈ ವರೆಗಿನ ಸಾಧನೆ: ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಪಿಎಂಸಿ ಸಚಿವರು, ಇದೀಗ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಕ್ಕರೆ, ಧಾರ್ಮಿಕ ಧತ್ತಿ, ಸಣ್ಣ ಕೈಗಾರಿಕೆ ಸಚಿವ
5)ಗೆಲುವಿನ ಕಾರಣವಾದ ಅಂಶ
ಆರಂಭದಿಂದಲೂ ಕೆಲಸಗಾರ ಎಂದು ಕ್ಷೇತ್ರದಾದ್ಯಂತ ಹೆಸರು ಗಳಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಜೊತೆ ಅನ್ಯೋನ್ಯತೆ ಹೊಂದಿದ್ದಾರೆ. ಆರಂಭದಲ್ಲಿ ಸ್ಪರ್ಧೆಗೆ ಹಿಂದೇಟು ಹಾಕಿದ್ದರೂ ಕೊನೆಗೆ ಮೈಚಳಿ ಬಿಟ್ಟು ಪ್ರಚಾರ ಕೈಗೊಂಡರು. ಎದುರಾಳಿ ಅಭ್ಯರ್ಥಿಯ ಬಗ್ಗೆ ಜನರಿಗಿರುವ ಭ್ರಮನಿರಸನದಿಂದ ಮೋದಿ ಅಲೆ ನಡುವೆಯೂ ಅಲ್ಪಅಂತರದಿಂದ ಗೆಲುವಿನ ದಡ ಸೇರಿದ್ದಾರೆ.

6)ಸಮೀಪದ ಪ್ರತಿಸ್ಪರ್ಧಿ-1) ರಮೇಶ ಕತ್ತಿ (ಬಿಜೆಪಿ)
ಪಡೆದ ಮತ- 471370
2) ಪ್ರತಾಪರಾವ್ ಪಾಟೀಲ (ಎನ್‌ಸಿಪಿ)
ಪಡೆದ ಮತ- 42735
7) ಕ್ಷೇತ್ರದ ಒಟ್ಟು ಮತದಾರರು: 1435510, ಮತ ಚಲಾಯಿಸಿದವರು- 1070610
8) ಕ್ಷೇತ್ರದ ಒಟ್ಟು ಶೇಕಡಾವಾರು ಮತದಾನ- ಶೇ.74.58.
9) ಗೆದ್ದ ಅಭ್ಯರ್ಥಿಯ ಎರಡು ಸಾಲಿನ ಅಭಿಪ್ರಾಯ
25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಜನರ ನಡುವೆ ಉಳಿದು ಅವರ ಸಮಸ್ಯೆ ಪರಿಹರಿಸುವುದು ನನ ಆಧ್ಯತೆ. ಯಾವುದೇ ಸರ್ಕಾರವಿರಲಿ ಜನರ ಸಮಸ್ಯೆಗೆ ಸ್ಪಂದಿಸುತ್ತ ಬಂದಿದ್ದೇನೆ. ಜನ ವರ್ಕರ್ ಎಂದು ಗುರುತಿಸಿ ಗೆಲ್ಲಿಸಿದ್ದಾರೆ. ವಿಶ್ವಾಸ ಉಳಿಸಿಕೊಳ್ಳುವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement