ವಡೋದರಾ ಜನತೆಗೆ ಮೋದಿ ಧನ್ಯವಾದ
ವಡೋದಾರ ಲೋಕಸಭಾ ಕ್ಷೇತ್ರದಲ್ಲಿ ಬಾರಿ ಅಂತರದ ಮತಗಳಿಂದ ಗೆದ್ದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ...
ವಡೋದರಾ: ವಡೋದಾರ ಲೋಕಸಭಾ ಕ್ಷೇತ್ರದಲ್ಲಿ ಬಾರಿ ಅಂತರದ ಮತಗಳಿಂದ ಗೆದ್ದಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಿದರು.
ಫಲಿತಾಂಶದ ನಂತರ ಮೊದಲ ಬಾರಿಗೆ ವಡೋದರಾದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವದಿಸಿದ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ವಡೋದರಾಗೆ ಕೇವಲ 50 ನಿಮಿಷಗಳ ಸಮಯ ಕೊಟ್ಟಿದ್ದೆ ಆದರೂ ಜನತೆ ಮತ ಅಮೂಲ್ಯ ಮತ ನೀಡಿ ಗೆಲ್ಲಿಸಿದ್ದೀರ ಇದಕ್ಕೆ ನಾನು ಅಭಾರಿ ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ನಾನು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಾದ ವಡೋದರಾ ಮತ್ತು ವಾರಣಾಸಿಯಲ್ಲಿ ಮತದಾರರೊಂದಿಗೆ ಮಾತನಾಡಲು ಹೆಚ್ಚು ಅವಕಾಶ ಸಿಕ್ಕಿರಲಿಲ್ಲ ಆದರೂ ಜನತೆ ನನ್ನ ಹಾರಿಸಿದ್ದೀರ ಇದಕ್ಕೆ ನಾನು ಚಿರಋಣಿ. ಅದರಲ್ಲೂ ವಡೋದರಾ ಕ್ಷೇತ್ರದ ಜನತೆ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಸುಮಾರು 5 ಲಕ್ಷ 70 ಸಾವಿರ ಮತಗಳ ಅಂತರದಲ್ಲಿ ಗೆಲವು ಸಾಧಿಸಲು ಅವಕಾಶ ಕೊಟ್ಟಿದ್ದು, ದೇಶದಲ್ಲಿ ನಡೆದ ಚುನಾವಣೆಗಳಲ್ಲಿ ದಾಖಲೆ ಅಂತರದ ಗೆಲುವು ಇದಾಗಿದೆ ಎಂದರು. ಜೊತೆಗೆ ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಗುಜರಾತ್ ಜನತೆಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದೀರ ಇದರೊಂದಿಗೆ ದೇಶಕ್ಕೆ ಒಳ್ಳೆಯ ದಿನಗಳು ಬಂದಿವೆ. ದೇಶವನ್ನು ಅಭಿವೃದ್ಧಿ ಪತದಲ್ಲಿ ನಡೆಸಲು ನಾನು ಸಿದ್ಧ ಎಂದರು.