ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

2002 ಗುದ್ದೋಡು ಪ್ರಕರಣ: ಸಲ್ಮಾನ್‌ರನ್ನು ಗುರುತಿಸಿದ 4ನೇ ಸಾಕ್ಷಿ

Vishwanath S
Updated On : 19 May 2014, 5:30 am

ಮುಂಬೈ: 2002ರ ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ನಾಲ್ಕನೇ ಸಾಕ್ಷಿ ಗುರುತಿಸಿ, ಅಂದು ಖಾನ್ ಕುಡಿದಿದ್ದರು ಎಂಬ ಹೇಳಿಕೆ ಸಲ್ಮಾನ್ ಖಾನ್‌ರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಸಲ್ಮಾನ್ ಖಾನ್ ಮತ್ತವರ ಸ್ನೇಹಿತರು ರಾತ್ರಿ ನಮ್ಮ ಬಾರ್‌ಗೆ ಬಂದು ಮದ್ಯವನ್ನು ಖರೀದಿಸಿದ್ದರು ಎಂದು ಪ್ರಕರಣದ ಸಾಕ್ಷಿಯಾದ ಮೊಲೈ ಬಾಗ್ ಎಂಬುವರು ಇಂದು ನ್ಯಾಯಾಧೀಶರಾದ ಡಿ.ಡಬ್ಲೂ ದೇಶಪಾಂಡೆ ಅವರ ಮುಂದೆ ಹೇಳಿಕೆ ನೀಡಿದ್ದಾರೆ.

ದೊಡ್ಡ ಕಾರೊಂದು ಅಂಗಡಿ ಬಳಿ ಇರುವ ರಸ್ತೆ ಉಬ್ಬನ್ನು ಹಾರಿಸಿಕೊಂಡು ಬಾಗಿಲಿಗೆ ಹೊಡೆಯುವ ರೀತಿಯಲ್ಲಿ ಬಂದು ನಿಂತಿತು. ಹಾಗಾ ಏನಾಯಿತು ಎಂದು ನೋಡುವಷ್ಟರಲ್ಲಿ ಸಲ್ಮಾನ್ ಖಾನ್ ಮತ್ತವರ ಸ್ನೇಹಿತರು ಮದ್ಯ ಕೊಡುವಂತೆ ದಬಾಯಿಸಿದ್ದರು. ಆಗ ನಾನು ಅವರಿಗೆ ಕಾಕ್‌ಟೈಲ್ ಮತ್ತು ಬಕಾರ್ಡಿ(ಬಿಳಿ ವೈನ್) ನೀಡಿದೆ ಎಂದರು.

ಅಲ್ಲದೆ ವಾಹನವನ್ನು ಸ್ವತಃ ಸಲ್ಮಾನ್ ಖಾನ್ ಓಡಿಸುತ್ತಿದ್ದರು ಎಂದೂ ಮೊಲೈ ಬಾಗ್ ಹೇಳಿಕೆ ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ನಡೆದಿದ್ದ ತನಿಖೆ ವೇಳೆ ಸಲ್ಮಾನ್ ಕಾರು ಚಾಲನೆ ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತಿತ್ತು.
ಘಟನೆ ಹಿನ್ನಲೆ: ಸೆಪ್ಟೆಂಬರ್ 2002ರಲ್ಲಿ  ಬಾಂದ್ರಾದ ರಸ್ತೆ ಬದಿಯಲ್ಲಿ ಮಲಗಿದ್ದ ಜನರ ಮೇಲೆ ಅಸಡ್ಡೆಯಿಂದ ತಮ್ಮ ಕಾರು ಓಡಿಸಿದರ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ನಾಲ್ವರಿಗೆ ಗಾಯಗಳಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement