ಬಿಹಾರದ ನೂತನ ಸಿಎಂ ಜಿತನ್ ರಾಮ್ ಮಾಂಝಿ
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ದಲಿತ ನಾಯಕ ಜಿತನ್ ರಾಮ್ ಮಂಝಿ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.
ಪಾಟ್ನಾದ ರಾಜ್ಯಪಾಲ ಭವನದಲ್ಲಿ ಇಂದು ಸಂಜೆ ರಾಜ್ಯಪಾಲ ಡಿ.ವೈ ಪಾಟೀಲ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದು, ಗಣ್ಯರ ಸಮ್ಮುಖದಲ್ಲಿ ನೂತನ ಸಿಎಂ ಆಗಿ ಜಿತನ್ ರಾಮ್ ಮಂಝಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಸುತ್ತ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜೆಡಿಯು ಹೀನಾಯವಾಗಿ ಸೋಲುಂಡಿದ್ದರಿಂದ ನೈತಿಕ ಹೊಣೆ ಹೊತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಿಎಂ ಹುದ್ದೆಗೆ ರಾಜಿನಾಮೆ ನೀಡಿದ್ದರು. ಇದರೊಂದಿಗೆ ತೆರವುಗೊಂಡಿದ್ದ ನೂತನ ಸಿಎಂ ಹುದ್ದೆಗಾಗಿ ಬಿಹಾರದ ಪ್ರಮುಖ ಸಚಿವರ ಹೆಸರುಗಳು ಕೇಳಿಬಂದಿತ್ತು. ಆದರೆ ಕೊನೆಗೆ ಮಂಝಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ.