ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಳೆ ಅಸ್ಸಾಂ ಸಿಎಂ ತರುಣ್ ಗೊಗೊಯ್ ರಾಜಿನಾಮೆ?

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಅಸ್ಸಾಂ...

Vishwanath S
Updated On : 21 May 2014, 7:29 am

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಅಸ್ಸಾಂ ಮುಖ್ಯಂಮಂತ್ರಿ ತರುಣ್ ಗೊಗೊಯ್ ಗುರುವಾರ ರಾಜಿನಾಮೆ ಸಲ್ಲಿಸುವ ಸಾಧ್ಯತೆಗಳಿವೆ.

ಇಂದು ನವದೆಹಲಿಗೆ ತೆರಳಿದ ಗೊಗೊಯ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಿಎಂ ಹುದ್ದೆಗೆ ರಾಜಿನಾಮೆ ನೀಡುವ ಹಾಗೂ ಭವಿಷ್ಯದಲ್ಲಿ ತನ್ನ ಪಾತ್ರದ ಕುರಿತಾಗಿ ನಿರ್ದೇಶಿಸುವಂತೆ ಕೇಳಲು ತೆರಳಿದ್ದರು ಎನ್ನಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವವನ್ನು ಬದಲಿಸುವಂತೆ ಕೆಲ ಸಚಿವರು ಹಾಗೂ ಶಾಸಕರು ಬಂಡಾಯ ಎದ್ದಿದ್ದು ಹಾಗೂ ಲೋಕಸಭೆಯ ನೈತಿಕ ಹೊಣೆ ಹೊತ್ತು ಗೊಗೊಯ್ ಈ ತೀರ್ಮಾನಕ್ಕೆ ಬಂದಿದ್ದಾರೆ.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಅಸ್ಸಾಂನ 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನುಳಿದಂತೆ ಬಿಜೆಪಿ 7 ಸ್ಥಾನಗಳನ್ನು, ಎಐಡಿಯುಎಫ್ 3 ಹಾಗೂ ಇತರೆ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement