ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭೂಗತ ಪಾತಕಿ ಅನ್ಸಾರಿಯ ಗಲ್ಲುಶಿಕ್ಷೆ, ಜೀವಾವಧಿಗೆ ಪರಿವರ್ತಿಸಿದ ಸುಪ್ರೀಂ

2002ರ ಕೊಲ್ಕತಾ ಅಮೆರಿಕನ್ ಸೆಂಟರ್ ಮೇಲಿನ...

Vishwanath S
Updated On : 21 May 2014, 3:37 am

ನವದೆಹಲಿ: 2002ರ ಕೊಲ್ಕತಾ ಅಮೆರಿಕನ್ ಸೆಂಟರ್ ಮೇಲಿನ ದಾಳಿಯ ಪ್ರಮುಖ ಆರೋಪಿಗಳಾದ ಭೂಗತ ಪಾತಕಿ ಅಫ್ತಾಬ್ ಅಹ್ಮದ್ ಅನ್ಸಾರಿಗೆ ಹಾಗೂ ಜಮಾಲುದ್ದೀನ್ ನಾಸಿರ್‌ಗೆ ನೀಡಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಎ.ಕೆ. ಪಟ್ನಾಯಕ್ ಮತ್ತು ಫಕೀರ್ ಮಹಮದ್ ಇಬ್ರಾಹಿಂ ಕಲಿಫುಲ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಇಬ್ಬರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ತೀರ್ಪು ನೀಡಿದ್ದು, ಪ್ರಥಮ ಆರೋಪಿಯಾದ ಅಫ್ತಾಬ್ ಅಹ್ಮದ್ ಅನ್ಸಾರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದು, ಅನ್ಸಾರಿ ಜೀವನ ಪರಿಯಂತ ಜೈಲಿನಲ್ಲೇ ಕಳೆಯಬೇಕಿದೆ. ಮತ್ತೋಬ್ಬ ಆರೋಪಿ ಜಮಾಲುದ್ದೀನ್ ನಾಸಿರ್‌ಗೆ 30 ವರ್ಷಗಳ ಸೆರೆಮನೆ ವಾಸ ವಿಧಿಸಿದೆ.

2002ರ ಜನವರಿ 22ರಂದು ಕೊಲ್ಕತಾದಲ್ಲಿನ ಅಮೆರಿಕ ಸೆಂಟರ್ ಮೇಲೆ ನಡೆದ ದಾಳಿಯಲ್ಲಿ ಆರು ಮಂದಿ ಪೊಲೀಸರು ಸಾವನ್ನಪ್ಪಿದ್ದು, 14 ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈ ಮೂಲದ ಭೂಗತ ಪಾತಕಿಯಾಗಿದ್ದ ಅನ್ಸಾರಿ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ತನಿಖೆ ವೇಳೆ ಪೊಲೀಸರು ಪತ್ತೆ ಹಚ್ಚಿದ್ದರು. ನಂತರ ಅನ್ಸಾರಿಯನ್ನು ದುಬೈನಲ್ಲಿ ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ 2005ರಲ್ಲಿ ಏಳು ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಏಳು ಆರೋಪಿಗಳು ಕೊಲ್ಕತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆದ ಕೋರ್ಟ್ ಅಫ್ತಾಬ್ ಮತ್ತು ಜಾಮಿಲುದ್ದೀನ್ ನಾಸಿಕೆಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇನ್ನುಳಿದ ಐವರ ಗಲ್ಲು ಶಿಕ್ಷೆಯನ್ನು ಜೀವವಾಧಿ ಶಿಕ್ಷೆಯಾಗಿ ಪರಿವರ್ತಿಸಿ ತೀರ್ಪು ನೀಡಿತ್ತು. ಆನಂತರ ತಮ್ಮಗೆ ನೀಡಿದ್ದ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಅನ್ಸಾರಿ ಮತ್ತು ಜಾಮಾಲುದ್ದೀನ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement