ಸತತ 4ನೇ ಬಾರಿ ಸಿಎಂ ಗದ್ದುಗೆ ಏರಿದ ನವೀನ್ ಪಟ್ನಾಯಕ್
ಸತತ ನಾಲ್ಕನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಿ ನವೀನ್...
ಭುವನೇಶ್ವರ್: ಸತತ ನಾಲ್ಕನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
ಸತತ ಮೂರು ಬಾರಿ ಒಡಿಶಾದ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಿ ಯಶ್ವಸಿಯಾಗಿದ್ದ ಪಟ್ನಾಯಕ್, ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲೂ ಬಿಜೆಡಿಗೆ ಸ್ವಷ್ಟ ಬಹುಮತ ಬಂದಿದ್ದು, ನಾಲ್ಕನೇ ಬಾರಿಗೂ ಅಧಿಕಾರದ ಗದ್ದುಗೆಗೆ ಏರಿದ್ದಾರೆ.
ರಾಜಭವನದ ಆವರಣದಲ್ಲಿ ಇಂದು ಬೆಳಗ್ಗೆ ೧೦.೧೦ರಲ್ಲಿ ಸುಮಾರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಡಾ.ಎಸ್.ಸಿ ಜಾಮೀರ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದು, ಗಣ್ಯರ ಸಮ್ಮುಖದಲ್ಲಿ ನವೀನ್ ಪಟ್ನಾಯಕ್ ಒಡಿಶಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 147 ಕ್ಷೇತ್ರಗಳ ಪೈಕಿ 117 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತ್ತು. ಹೀಗಾಗಿ ನವೀನ್ ಪಟ್ನಾಯಕ್ ಪುನಃ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ.