ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಗೆ ಬಿಎಸ್‌ವೈ ಪತ್ರ: ರಾಜ್ಯ ನಾಯಕತ್ವಕ್ಕೆ ಪರೋಕ್ಷ ಒಪ್ಪಿಗೆ

Lingaraj Badiger
Updated On : 22 May 2014, 12:27 pm

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ರಾಜ್ಯ ನಾಯಕತ್ವಕ್ಕೆ ಪರೋಕ್ಷ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮೇ 18ರಂದು ದೆಹಲಿಯ ಗುಜರಾತ್ ಭವನದಲ್ಲಿ ನಾನು ನಿಮ್ಮನ್ನು ಭೇಟಿ ಮಾಡಿದ್ದೆ, ಬಳಿಕ ಮೇ 20ರಂದು ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ನೀವು ಮಾಡಿದ ಭಾಷಣ ಕೇಳಿದ್ದೇನೆ. ಇದಾದ ನಂತರ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ.

ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಹಾಗೂ ಯುವ ಮತದಾರರು ಬಿಜೆಪಿಗೆ ಮತಹಾಕಿದ್ದು, ದೇಶದ ಜನತೆ ಬಿಜೆಪಿ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ನಿರೀಕ್ಷೆ ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರ ಹಾಗೂ ಬಿಜೆಪಿ ಮೇಲಿದೆ. ಇದರ ಅನುಷ್ಠಾನಕ್ಕೆ ರಾಜ್ಯಗಳಲ್ಲಿ ಸಮರ್ಥ ನಾಯಕತ್ವದ ಅವಶ್ಯಕತೆ ಇದೆ ಎಂದು ನೀವು ಸಲಹೆ ನೀಡಿದ್ದೀರಿ. ಅಲ್ಲದೆ ಅರ್ಹರಿಗೆ ಬಿಜೆಪಿ ನಾಯಕತ್ವ ನೀಡಲು ಸಲಹೆ ನೀಡಿದ್ದೀರಿ. ನಿಮ್ಮ ಸಲಹೆಯಂತೆ ನಾನು ಸ್ವಯಂ ಪ್ರೇರಣೆಯಿಂದ ರಾಜ್ಯದ ನಾಯಕತ್ವ ವಹಿಸಿಕೊಳ್ಳುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ನೀವು ಒಬ್ಬ ಯಶಸ್ವಿ ಪ್ರಧಾನಿಯಾಗಬೇಕು ಎಂಬುದು ನನ್ನಾಸೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement