ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಹಾರ ವಿಧಾಸಭೆಯಲ್ಲಿ ಜೆಡಿಯು ಬಹುಮತ ಸಾಬೀತು

ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಬೆಂಬಲದೊಂದಿಗೆ ಬಿಹಾರ ..

Lingaraj Badiger
Updated On : 23 May 2014, 4:23 am

ಪಟನಾ: ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಬೆಂಬಲದೊಂದಿಗೆ ಬಿಹಾರ ವಿಧಾಸಭೆಯಲ್ಲಿ ಜೀತನ್‌ರಾಮ್ ಮಾಂಝಿ ನೇತೃತ್ವದ ಜೆಡಿಯು ಸರ್ಕಾರ ಶುಕ್ರವಾರ ಬಹುಮತ ಸಾಬೀತುಪಡಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆಹೊತ್ತು ನಿತಿಶ್ ಕುಮಾರ್ ಅವರು ಕಳೆದ ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಮಾಂಝಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಬಹುಮತದ ಕೊರೆತೆ ಎದುರಿಸುತ್ತಿದ್ದ ಮಾಂಝಿ ಅವರಿಗೆ ಲಾಲು ಪ್ರಸಾದ್ ಯಾದವ್ ಅವರು ನಿನ್ನೆ ಬೇಷರತ್ ಬೆಂಬಲ ಘೋಷಿಸಿದ್ದರಿಂದ ಇಂದು ವಿಶ್ವಾಸಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

20 ವರ್ಷದ ಬಳಿಕ ಒಂದಾದ ಲಾಲು, ನೀತಿಶ್
20 ವರ್ಷದ ಬಳಿಕ ಅಚ್ಚರಿಯ ಬೆಳವಣಿಗೆಯೆಂಬಂತೆ, ಬಿಹಾರದ ಹೊಸ ಜೆಡಿಯು ಸರ್ಕಾರಕ್ಕೆ ಪ್ರತಿಪಕ್ಷ ಆರ್‌ಜೆಡಿ ಬೇಷರತ್ ಬೆಂಬಲ ಸೂಚಿಸಿದೆ. ಅಷ್ಟೇ ಅಲ್ಲ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಬದ್ಧ ವೈರಿಗಳಾಗಿದ್ದ ನಾವು ಒಂದಾಗಲು ನಿರ್ಧರಿಸಿದೆವು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಲಾಲು-ನಿತೀಶ್ ನೆರೆಹೊರೆ: ಇದೇ ವೇಳೆ, ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್ ಅವರು ಇನ್ನು ಮುಂದೆ ಲಾಲು ಪ್ರಸಾದ್‌ರ ನಿವಾಸದ ಪಕ್ಕದಲ್ಲೇ ವಾಸಿಸಲಿದ್ದಾರೆ. ಇಬ್ಬರು ನಾಯಕರ ಮನೆಗಳಿಗೆ ಒಂದು ರಸ್ತೆ ಮಾತ್ರವೇ ಅಡ್ಡವಿರಲಿದೆ. ಸದ್ಯದಲ್ಲೇ ಸಿಎಂ ನಿವಾಸವನ್ನು ತೊರೆದು ನಿತೀಶ್ ಹೊಸ ಮನೆಗೆ ಬರಲಿದ್ದಾರೆ. ನಿತೀಶ್ ರಾಜ್ಯಸಭೆಗೆ ಹೋಗವ ಸಂಭವ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement