ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭೂ ಕುಸಿತ; ಕೇದಾರನಾಥ ಯಾತ್ರೆಗೆ ತಾತ್ಕಾಲಿಕ ತಡೆ

ರುದ್ರಪ್ರಯಾಗದಲ್ಲಿ ಭೂ ಕುಸಿತ ಸಂಭವಿಸಿರುವುದರಿಂದ ಉತ್ತರಾಖಂಡದ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ...

Rashmi Kasaragodu
Updated On : 24 May 2014, 3:54 am

ಡೆಹ್ರಾಡೂನ್:  ರುದ್ರಪ್ರಯಾಗದಲ್ಲಿ ಭೂ ಕುಸಿತ ಸಂಭವಿಸಿರುವುದರಿಂದ ಉತ್ತರಾಖಂಡದ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ.

ಮಳೆಯಿಂದಾಗಿ ತಿಲ್‌ವಾಡಾ- ಗುಪ್ತ್‌ಕಾಶಿ ದಾರಿಯಲ್ಲಿ ಭೂ ಕುಸಿತವುಂಟಾಗಿದ್ದು, ಯಾತ್ರೆ ಮುಂದುವರಿಸದಂತೆ ಎಚ್ಚರಿಕೆ ನೀಡಲಾಗಿದೆ.

ಸದ್ಯ, ಪ್ರಸ್ತುತ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.

ಇದೀಗ ಕೇದಾರನಾಥ ಯಾತ್ರೆಯನ್ನು ಸೋನ್‌ಪ್ರಯಾಗ್‌ನಲ್ಲಿ ನಿಲ್ಲಿಸಲಾಗಿದ್ದು, ಮಳೆ ನಿಂತ ಮೇಲೆ ಯಾತ್ರೆ ಮುಂದುವರಿಸಲಾಗುವುದು ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement