ಮೋದಿ ಸಂಪುಟದಲ್ಲಿ ರಾಜ್ಯದ ಮೂವರಿಗೆ ಸ್ಥಾನ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಮೂವರು ಸಂಸದರಿಗೆ ಸ್ಥಾನ ನೀಡಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್...
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಮೂವರು ಸಂಸದರಿಗೆ ಸ್ಥಾನ ನೀಡಲಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ಅವರು ಇಂದು ಮೋದಿ ಅವರೊಂದಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅನಂತ್ ಕುಮಾರ್ ಹಾಗೂ ಸದಾನಂದಗೌಡ ಅವರಿಗೆ ಸಂಪುಟ ದರ್ಜೆ ಹಾಗೂ ಸಿದ್ದೇಶ್ವರ್ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ.
ಇಂದು ಸಂಜೆ 6ಗಂಟೆಗೆ ನರೇಂದ್ರ ಮೋದಿ ಅವರು ಭಾರತದ 15 ಪ್ರಧಾನಿಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಒಟ್ಟು 45 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಪೈಕಿ 24 ಸಂಪುಟ ದರ್ಜೆ ಸಚಿವರು ಹಾಗೂ 11 ರಾಜ್ಯ ಖಾತೆ ಸಚಿವರು ಮತ್ತು 10 ಮಂದಿ ಸ್ವತಂತ್ರ ಖಾತೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಸಚಿವ ಸ್ಥಾನ ಖಚಿತಪಡಿಸಿದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಡಿ.ವಿ.ಸದಾನಂದಗೌಡ ಅವರು, ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದೇಶ್ವರ್, ಮೋದಿ ಸಂಪುಟ ಸೇರುತ್ತಿರುವುದು ಸಂತಸ ತಂದಿದೆ. ಖಾತೆ ಹಂಚಿಕೆ ಬಗ್ಗೆ ನನಗೆ ಇನ್ನು ಯಾವುದೇ ಮಾಹಿತಿ ಇಲ್ಲ. ಆದರೆ ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥಿವಾಗಿ ನಿರ್ವಹಿಸುತ್ತೇನೆ ಎಂದಿದ್ದಾರೆ.
ಮೋದಿ ಸಂಪುಟ
ಸಂಪುಟ ದರ್ಜೆ ಸಚಿವರು
ರಾಜನಾಥ್ ಸಿಂಗ್-ಗೃಹ ಖಾತೆ
ಸುಷ್ವಾ ಸ್ವರಾಜ್- ವಿದೇಶಾಂಗ
ಅರುಣ್ ಜೇಟ್ಲಿ - ಹಣಕಾಸು, ಹೆಚ್ಚುವರಿಯಾಗಿ ರಕ್ಷಣಾ ಖಾತೆ
ರವಿಶಂಕರ್ ಪ್ರಸಾದ್- ಕಾನೂನು, ಟೆಲಿಕಾಂ
ಅನಂತ್ ಕುಮಾರ್ - ಸಂಸದೀಯ ವ್ಯವಹಾರ
ಡಿ.ವಿ.ಸದಾನಂದಗೌಡ - ರೇಲ್ವೆ
ನಿತಿನ್ ಗಡ್ಕರಿ- ಮೂಲಸೌಕರ್ಯ
ಸ್ಮೃತಿ ಇರಾನಿ -ಮಾನವ ಸಂಪನ್ಮೂಲ
ವೆಂಕಯ್ಯ ನಾಯ್ಡು -ನಗರಾಭಿವೃದ್ಧಿ
ಮನೇಕಾ ಗಾಂಧಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
ರಾಧಾಮೋಹನ್ ಸಿಂಗ್ - ಕೃಷಿ
ಉಮಾ ಭಾರತಿ
ನಜ್ಮಾ ಹೆಫ್ತುಲ್ಲಾ
ಗೋಪಿನಾಥ್ ಮುಂಡೆ
ರಾಮ್ ವಿಲಾಸ್ ಪಾಸ್ವಾನ್
ಟಿಡಿಪಿಯ ಅಶೋಕ್ ಗಜಪತಿ ರಾಜು
ಶಿವಸೇನಾ ಪಕ್ಷದ ಅನಂತ್ ಗೀತೆ
ಹರ್ಸಿಮ್ರಾತ್ ಕೌರ್ ಬಾದಲ್
ನರೇಂದ್ರ ಸಿಂಗ್ ಟೋಮರ್
ಜೌಲ್ ಒರಂ
ಥಾವರ್ ಸಿಂಗ್ ಗೆಹ್ಲೋಟ್
ಡಾ.ಹರ್ಷವರ್ದನ್
ಸ್ವತಂತ್ರ ಖಾತೆ ಸಚಿವರು
ವಿ.ಕೆ.ಸಿಂಗ್
ರಾವ್ ಇಂದ್ರಜೀತ್ ಸಿಂಗ್
ಸಂತೋಷ್ ಕುಮಾರ್ ಗಂಗಾವರ್
ಶ್ರೀಪಾದ್ ನಾಯಕ್
ಧರ್ಮೇಂದ್ರ ಪ್ರದಾನ್
ಸರಬಾನಂದ್ ಸೋನೋವಾಲ್
ಪ್ರಕಾಶ್ ಜಾವೇಡ್ಕರ್
ಪಿಯೂಸ್ ಗೋಯಲ್
ಡಾ.ಜೀತೇಂದ್ರ ಸಿಂಗ್
ರಾಜ್ಯ ಖಾತೆ ಸಚಿವರು
ಜಿ.ಎಂ.ಸಿದ್ದೇಶ್ವರ್
ನಿರ್ಮಲಾ ಸೀತಾರಾಮನ್
ಮನೋಜ್ ಸಿನ್ಹಾ
ಕೃಷ್ಣಪಾಲ್ ಗುಜ್ಜರ್
ಸಂಜೀವ್ ಬಲಿಯಾನ್
ಸುದರ್ಶನ್ ಭಗತ್
ಉಪೇಂದ್ರ ಕುಶ್‌ವಾಹ್
ವಿಷ್ಣುದೇವ್
ಸಂಜೀವ್ ಕುಮಾರ್