ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅನಿಲದರ ಏರಿಕೆ ಬಗ್ಗೆ ಮೌನ ವಹಿಸಿದ ತೈಲ ಸಚಿವ

ಅನಿಲ ದರ ಏರಿಕೆ ವಿಚಾರ ಮುಂದಿರುವ ಈ ವೇಳೆಯಲ್ಲಿ ಮೋದಿ ಸರ್ಕಾರದಲ್ಲಿ ತೈಲ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಧರ್ಮೇಂದ್ರ...

Rashmi Kasaragodu
Updated On : 27 May 2014, 3:51 am

ನವದೆಹಲಿ: ಅನಿಲ ದರ ಏರಿಕೆ ವಿಚಾರ ಮುಂದಿರುವ ಈ ವೇಳೆಯಲ್ಲಿ ಮೋದಿ ಸರ್ಕಾರದಲ್ಲಿ ತೈಲ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಧರ್ಮೇಂದ್ರ ಪ್ರಧಾನ್, ತಾವು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಮುಂದಿನ ಹೆಜ್ಜೆಗಳನ್ನಿಡುವುದಾಗಿ ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಒಡಿಶಾದ ದೇಬೇಂದ್ರ ಪ್ರಧಾನ್ ಅವರ ಪುತ್ರರಾಗಿದ್ದಾರೆ ಧರ್ಮೇಂದ್ರ ಪ್ರಧಾನ್. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಜನರಿಗೆ ಹೆಚ್ಚಿನ ಭರವಸೆ ಇದೆ, ನಾವು ಅದನ್ನೆಲ್ಲಾ ಈಡೇರಿಸುತ್ತೇವೆ  ಎಂದು ಪ್ರಧಾನ್ ಹೇಳಿದ್ದಾರೆ. ಅದೇ ವೇಳೆ ತೈಲದ ಸಮಸ್ಯೆಯನ್ನು ಪರಿಹರಿಸಲು ಭಾರತ ಆರ್ಥಿಕವಾಗಿ ಸುದೃಢವಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಅನಿಲ ದರ ಏರಿಕೆಯ ಬಗ್ಗೆ ಮೌನವಹಿಸಿದ ಸಚಿವರು, ಪ್ರಸ್ತುತ ಖಾತೆಗೆ ಸಂಬಂಧಿಸಿದಂತೆ ಹಲವಾರು ಸವಾಲು ಮತ್ತು ಸಮಸ್ಯೆಗಳಿವೆ. ಎಲ್ಲವನ್ನೂ ಪರಿಹರಿಸುವೆ ಎಂದು ಆಶ್ವಾಸನೆ ನೀಡುವ ಮುನ್ನ ನನಗೆ ಇದರ ಬಗ್ಗೆ ಅರಿತುಕೊಳ್ಳಬೇಕಾಗಿದೆ. ನನಗೆ ಈ ಖಾತೆಯಲ್ಲಿರುವ ಸವಾಲುಗಳೇನು ಎಂಬುದು ಗೊತ್ತಿದೆ ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement