ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಅಧಿಕಾರ ಸ್ವೀಕಾರ
ಮೋದಿ ಸಚಿವ ಸಂಪುಟದಲ್ಲಿ ವಿತ್ತ ಹಾಗು ಕಂಪನಿ ವ್ಯವಹಾರಗಳ ಖಾತೆ ಸಚಿವರಾಗಿ ಅರುಣ್ ಜೇಟ್ಲಿ ಮಂಗಳವಾರ ...
ನವದೆಹಲಿ: ಮೋದಿ ಸಚಿವ ಸಂಪುಟದಲ್ಲಿ ವಿತ್ತ ಹಾಗು ಕಂಪನಿ ವ್ಯವಹಾರಗಳ ಖಾತೆ ಸಚಿವರಾಗಿ ಅರುಣ್ ಜೇಟ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮದವರೊಡನೆ ಮಾತನಾಡಿದ ಅವರು ಬೆಲೆ ಏರಿಕೆಯನ್ನು ತಡೆಯುವ ಬಗ್ಗೆ ಹಾಗು ಹೂಡಿಕೆದಾರರನ್ನು ಆಕರ್ಷಿಸಿ ದೇಶದ ಪ್ರಗತಿಯತ್ತ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಸದ್ಯ, ಭಾರತದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ತನ್ನ ಮುಂದೆ ಕಠಿಣ ಸವಾಲು ಇದೆ. ಆದ್ದರಿಂದ ನಾವು ಅಭಿವೃದ್ಧಿ , ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ರಕ್ಷಣಾ ಖಾತೆಯ ಉಸ್ತುವಾರಿಯನ್ನೂ ವಹಿಸಲಾಗಿದ್ದು, ಈ ಹೊಣೆಗಾರಿಕೆ ತಾತ್ಕಾಲಿಕ. ಇನ್ಮುಂದೆ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಅಲ್ಲಿಯವರೆಗೆ ಮಾತ್ರ ನನಗೆ ರಕ್ಷಣಾ ಖಾತೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.