ಸಿಇಟಿ ಫಲಿತಾಂಶ ಪ್ರಕಟ
ವೈದ್ಯಕೀಯ/ ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ...
ಬೆಂಗಳೂರು: ವೈದ್ಯಕೀಯ/ ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಫಲಿತಾಂಶ ಪ್ರಕಟವಾಗಿದೆ.
ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಉನ್ನತ ಶಿಕ್ಷಣ ಸಚಿವ ಆರ್.ವಿ . ದೇಶಪಾಂಡೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಫಲಿತಾಂಶವನ್ನು ಪ್ರಕಟಿಸಿದರು.
ವೈದ್ಯಕೀಯ ವಿಭಾಗದಲ್ಲಿ ಶೇ. 93.88 ಅಂಕಗಳನ್ನು ಗಳಿಸಿದ ಬೆಂಗಳೂರಿನ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ ಅಗರ್ವಾಲ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಅದೇ ವೇಳೆ 91.11 ಶೇ. ಅಂಕಗಳನ್ನು ಗಳಿಸಿದ ಹೆಚ್.ಬಿ. ನೇಹಾ ಎರಡನೇ ರ್ಯಾಂಕ್ ಗಳಿಸಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ನಾರಾಯಣ ಪಿ.ಯು ಕಾಲೇಜಿನ ಶ್ರೀನಿಧಿ ಪ್ರಭು ಶೇ. 96.15 ಅಂಕಗಳನ್ನು ಗಳಿಸಿ ಪ್ರಥಮ, ಚೇತನ್ ಪಿ.ಯು ಕಾಲೇಜಿನ ರಾನಥ್ ಬಿರಂಗಿ ಶೇ. 95.83 ಅಂಕಗಳನ್ನು ಪಡೆದು ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ.
ಮೇ 1 ಮತ್ತು 2 ರಂದು 2014 -15 ನೇ ಸಾಲಿನ ಸಿಇಟಿ ಪರೀಕ್ಷೆ ನಡೆದಿತ್ತು. ಜೂನ್ 24 ರಂದು ಮೊದಲ ಕೌನ್ಸಿಲಿಂಗ್ ನಡೆಯಲಿದೆ.