2020ರ ಹೊತ್ತಿಗೆ ಎಲ್ಲರಿಗೂ ವಸತಿ ಸೌಕರ್ಯ: ವೆಂಕಯ್ಯ ನಾಯ್ಡು
100 ಸ್ಮಾರ್ಟ್ ಸಿಟಿ ಹಾಗು ವಸತಿ ಸಾಲದ ಬಡ್ಡಿಯಲ್ಲಿ ಕಡಿತ ನೀಡುವುದಾಗಿ ಹೇಳಿದ ನಗರಾಭಿವೃದ್ದಿ, ವಸತಿ ಮತ್ತು ಬಡತನ ...
ನವದೆಹಲಿ: 100 ಸ್ಮಾರ್ಟ್ ಸಿಟಿ ಹಾಗು ವಸತಿ ಸಾಲದ ಬಡ್ಡಿಯಲ್ಲಿ ಕಡಿತ ನೀಡುವುದಾಗಿ ಹೇಳಿದ ನಗರಾಭಿವೃದ್ದಿ, ವಸತಿ ಮತ್ತು ಬಡತನ ನಿರ್ಮೂಲನಾ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಅವಳಿ ರಾಜ್ಯಗಳನ್ನು ಜೋಡಿಸುವ, ಸ್ಯಾಟಲೈಟ್ ಟೌನ್ಗಳ ಅಭಿವೃದ್ಧಿ ಹಾಗು ನಗರದ ಶುಚಿತ್ವದ ಬಗ್ಗೆ ನಗರಾಭಿವೃದ್ಧಿ ಇಲಾಖೆ ಮುತುವರ್ಜಿ ವಹಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ವಸತಿ ಸೌಕರ್ಯ ಒದಗಿಸುವುದು ನನ್ನ ಆದ್ಯ ಕರ್ತವ್ಯ. 2020ರ ಹೊತ್ತಿಗೆ ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸುವುದು ನನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.
ಅಟಲ್ ಬಿಹಾರಿ ವಾಡಪೇಯಿ ಅವರ ಆಡಳಿತದ ವೇಳೆ ವಸತಿ ನಿರ್ಮಾಣ ಬಡ್ಡಿದರ ಶೇ.11ರಿಂದ ಶೇ.7ಕ್ಕೆ ಇಳಿಸಲಾಗಿತ್ತು. ಆದರೆ ಈಗ ಅದು ಶೇ.10 ಮೀರಿದೆ.
2020ರ ಹೊತ್ತಿಗೆ ಎಲ್ಲರಿಗೂ ಸೂರು ಎಂಬ ಧ್ಯೇಯವನ್ನಿಟ್ಟುಕೊಂಡು ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.