ಎಸ್. ದಿವಾಕರ್ ಅವರ ಮೂರು ಕೃತಿ ಬಿಡುಗಡೆ
ಖ್ಯಾತ ಸಾಹಿತಿ ಎಸ್ ದಿವಾಕರ್ ಅವರ ಮೂರು ಕೃತಿಗಳು 2014 ಜೂನ್ 1 ರಂದು ಲೋಕಾರ್ಪಣೆಯಾಗಲಿದೆ...
ಬೆಂಗಳೂರು: ಖ್ಯಾತ ಸಾಹಿತಿ ಎಸ್ ದಿವಾಕರ್ ಅವರ ಮೂರು ಕೃತಿಗಳು 2014 ಜೂನ್ 1 ರಂದು ಲೋಕಾರ್ಪಣೆಯಾಗಲಿದೆ. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಕಂಬಾರ (ಖ್ಯಾತ ಲೇಖಕರು), ಡಾ. ಸಿ ಎನ್ ರಾಮಚಂದ್ರನ್ (ಖ್ಯಾತ ವಿಮರ್ಶಕರು), ಓ ಎಲ್ ನಾಗಭೂಷಣ ಸ್ವಾಮಿ (ಖ್ಯಾತ ವಿಮರ್ಶಕರು )ಭಾಗವಹಿಸಲಿದ್ದಾರೆ.
ಎಸ್. ದಿವಾಕರ್ ,ಜಯಶ್ರೀ ಕಾಸರವಳ್ಳಿ, ನರೇಂದ್ರ ಪೈ, ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿರುವರು.
ಜೂನ್ 1ರಂದು ಸಂಜೆ 5 ಗಂಟೆಗೆ ನಯನ ಸಭಾಂಗಣ , ಕನ್ನಡ ಭವನ, ಜೆ ಸಿ ರಸ್ತೆ , ಬೆಂಗಳೂರು ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ಲೊಕಾರ್ಪಣೆಯಾಗಲಿರುವ ಕೃತಿಗಳು
೧. ರೂಪರೂಪಗಳನು ದಾಟಿ
ಎಸ್ ದಿವಾಕರ್ ಅವರ ಅತ್ಯುತ್ತಮ ಬರಹಗಳು
(ಸಂಪಾದಕ) ನರೇಂದ್ರ ಪೈ
೨. ಹಾರಿಕೊಂಡು ಹೋದವನು
ಜಗತ್ತಿನ ಅತಿ ಸಣ್ಣ ಕತೆಗಳು
(ಸಂಪಾದನೆ ಮತ್ತು ಅನುವಾದ) ಎಸ್. ದಿವಾಕರ್
೩. ಈ ಊರಿನಲ್ಲಿ ಕಳ್ಳರೇ ಇಲ್ಲ
ಗಾಬ್ರಿಯೆಲ್ ಗಾರ್ಸಿಯ ಮಾರ್‌ಕೇಸ್‌ನ ನಾಲ್ಕು ಕತೆಗಳು
(ಕನ್ನಡಕ್ಕೆ) ಎಸ್. ದಿವಾಕರ್ ಮತ್ತು ಜಯಶ್ರೀ ಕಾಸರವಳ್ಳಿ
ಎಲ್ಲರಿಗೂ ಆದರದ ಸ್ವಾಗತ
ಮಾಹಿತಿಗಾಗಿ: 9886694580