ಕಪ್ಪು ಹಣದ ಬಗ್ಗೆ ಶೀಘ್ರ ತನಿಖೆ ನಡೆಸಲಾಗುವುದು: ಎಸ್ಐಟಿ ಮುಖ್ಯಸ್ಥ
ಕಪ್ಪು ಹಣದ ಬಗ್ಗೆ ಶೀಘ್ರ ತನಿಖೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಧೀಶ, ವಿಶೇಷ ತನಿಖಾ ತಂಡ ...
ಅಹ್ಮದಾಬಾದ್: ಕಪ್ಪು ಹಣದ ಬಗ್ಗೆ ಶೀಘ್ರ ತನಿಖೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಧೀಶ, ವಿಶೇಷ ತನಿಖಾ ತಂಡ (ಎಸ್ಐಟಿ)ದ ಮುಖ್ಯಸ್ಥ ಎಂಬಿ ಷಾ ಹೇಳಿದ್ದಾರೆ.
ನಿನ್ನೆ ನಡೆದ ಮೋದಿ ಸಂಪುಟ ಸಚಿವರ ಸಭೆಯಲ್ಲಿ ಕಪ್ಪು ಹಣದ ಬಗ್ಗೆ ಶೀಘ್ರ ತನಿಖೆ ಕೈಗೊಳ್ಳಬೇಕೆಂದು ಷಾ ಅವರಿಗೆ ಆದೇಶ ನೀಡಲಾಗಿತ್ತು.
ವಿದೇಶದಲ್ಲಿ ಅಡಗಿಸಿರುವ ಕಪ್ಪು ಹಣವನ್ನು ವಾಪಾಸು ತರುವ ಕಾರ್ಯಕ್ಕೆ ಹಲವಾರು ವಿಘ್ನಗಳಿವೆ. ಸದ್ಯ ಅದು ಕಷ್ಟದ ವಿಷಯವಾಗಿದ್ದರೂ ಆ ಅಡೆತಡೆಗಳನ್ನು ಮೀರಿ ಆದಷ್ಟು ಬೇಗನೆ ಕ್ರಮ ಕೈಗೊಳ್ಳುವೆ ಎಂದು ಷಾ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಅದೇ ವೇಳೆ ತನಿಖಾ ತಂಡದ ವರದಿ ಸಲ್ಲಿಕೆಗೆ ವಿಳಂಬವಾಗಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ನಾನು ನನ್ನ ಕೆಲಸವನ್ನು ಆದಷ್ಟು ಬೇಗ ಮುಗಿಸಲು ಯತ್ನಿಸುತ್ತೇನೆ ಎಂದು ಹೇಳಿದ್ದಾರೆ.