ನಾಳೆ ತೆಲಂಗಾಣ ಬಂದ್
ತೆಲಂಗಾಣದ 7 ಜಿಲ್ಲೆ ಗಳನ್ನು ಸೀಮಾಂಧ್ರದ ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ತೆಲಂಗಾಣ ...
ಹೈದ್ರಾಬಾದ್: ತೆಲಂಗಾಣದ 7 ಜಿಲ್ಲೆ ಗಳನ್ನು ಸೀಮಾಂಧ್ರದ ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ತೆಲಂಗಾಣ ನಿಯೋಜಿತ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಾಳೆ ತೆಲಂಗಾಣ ಬಂದ್ಗೆ ಆಹ್ವಾನ ನೀಡಿದ್ದಾರೆ.
ತೆಲಂಗಾಣದ 10 ಜಿಲ್ಲೆಗಳಲ್ಲಿ ನಾಳೆ ಬಂದ್ ಆಚರಿಸಲಾಗುವುದು.
ತಮ್ಮ ರಾಜ್ಯದಿಂದ ಒಂದು ಇಂಚು ಪ್ರದೇಶವೂ ಸೀಮಾಂಧ್ರದ ಪಾಲಾಗಬಾರದು. ಈ ಹಿಂದೆ ಯುಪಿಎ ಸರ್ಕಾರ ಈ ಬಗ್ಗೆ ನಿರ್ಧರಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ತೆಲಂಗಾಣದಲ್ಲಿ ಟಿಆರ್ಎಸ್ ಅಧಿಕಾರಕ್ಕೆ ಬಂದಿರುವುದರಿಂದ ಗುರುವಾರ ನಡೆಯಲಿರುವ ಬಂದ್ ಯಶಸ್ವಿಯಾಗಲಿದೆ. ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷ 63 ಹಾಗು ಲೋಕಸಭಾ ಚುನಾವಣೆಯಲ್ಲಿ 11 ಸೀಟುಗಳನ್ನು ಗೆದ್ದುಕೊಂಡಿತ್ತು.
ಕೆ.ಚಂದ್ರಶೇಖರ್ ರಾವ್ ಅವರು ನೂತನ ರಾಜ್ಯ ತೆಲಂಗಾಣದ ಮುಖ್ಯಮಂತ್ರಿಯಾಗಿ ಜೂನ್ 2ರಂದು ಅಧಿಕಾರ ಸ್ವೀಕರಿಸಲಿದ್ದಾರೆ.