ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

100 ದಿನದ ಅಜೆಂಡಾ ಸಿದ್ಧಪಡಿಸಿಕೊಳ್ಳಿ: ಸಚಿವರಿಗೆ ಮೋದಿ ಸೂಚನೆ

ನಿಮ್ಮ ಅಧಿಕಾರಿಗಳೊಂದಿಗೆ ಕುಳಿತು ಮೊದಲ 100 ದಿನದಲ್ಲಿ ಪ್ರಮುಖವಾಗಿ ಯಾವ ಕೆಲಸಗಳನ್ನು ಮಾಡಬೇಕು ಎಂಬುದರ ಪಟ್ಟಿ ಸಿದ್ಧಪಡಿಸಿಕೊಳ್ಳಿ ಎಂದು ಪ್ರಧಾನಮಂತ್ರಿ ...

Lingaraj Badiger
Updated On : 29 May 2014, 2:23 am

ನವದೆಹಲಿ: ನಿಮ್ಮ ಅಧಿಕಾರಿಗಳೊಂದಿಗೆ ಕುಳಿತು ಮೊದಲ 100 ದಿನದಲ್ಲಿ ಪ್ರಮುಖವಾಗಿ ಯಾವ ಕೆಲಸಗಳನ್ನು ಮಾಡಬೇಕು ಎಂಬುದರ ಪಟ್ಟಿ ಸಿದ್ಧಪಡಿಸಿಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಗುರುವಾರ ಸೂಚಿಸಿದ್ದಾರೆ.

ತಮ್ಮ ನೇತೃತ್ವದಲ್ಲಿ ಇಂದು ನಡೆದ ಎರಡನೇ ಸಚಿವ ಸಂಪುಟ ಸಭೆಯಲ್ಲಿ 10 ಅಂಶಗಳ ಅಜೆಂಡಾ ಜಾರಿಗೆ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.

10 ಅಂಶಗಳ ಅಜೆಂಡಾ
1. ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಸೂಚನೆ
2. ಅಧಿಕಾರಿಗಳ ಹೊಸ ವಿಚಾರಗಳನ್ನು ಸ್ವಾಗತಿಸಿ, ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿ
3. ಕುಡಿಯ ನೀರಿ, ಶಿಕ್ಷಣ, ವಿದ್ಯುತ್, ರಸ್ತೆ, ಆರೋಗ್ಯ ಮತ್ತು ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿ
4. ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಇರಲಿ
5. ಇ-ಹರಾಜು ನೀತಿ ಜಾರಿಗೆ ತರಲು ಸೂಚನೆ
6. ಉನ್ನತ ಮಟ್ಟದ ಸಚಿವರ ತಂಡದ ಸಭೆ ಬೇಡ, ಇಲಾಖೆಗಳ ನಡುವೆ ಸಮನ್ವಯತೆ ಇರಲಿ
7. ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳಿಗೆ ಮೊದಲ ಆದ್ಯತೆ
8. ಕಾಲ ಮಿತಿಯಲ್ಲಿ ಸರ್ಕಾರದ ನೀತಿಗಳನ್ನು ಜಾರಿಗೆ ತರಬೇಕು
9. ಆಡಳಿತ ಯಂತ್ರದಲ್ಲಿ ಜನಕೇಂದ್ರಿತ ವ್ಯವಸ್ಥೆ ಇರಲಿ
10. ಸ್ಥಿರತೆ ಮತ್ತು ಸದೃಢತೆ ಸರ್ಕಾರದ ನೀತಿಗಳಲ್ಲಿರಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement