ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಂತರ್ಜಾಲದಲ್ಲಿ 'ಜನರನ್ನು ಕಾಡುವ' 100 ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್, ಸಚಿನ್

Rashmi Kasaragodu
Updated On : 29 May 2014, 8:42 am

ನ್ಯೂಯಾರ್ಕ್: ಟೈಮ್ ಮ್ಯಾಗಜಿನ್ ಪ್ರಕಟಿಸಿದ "ಅಂತರ್ಜಾಲದಲ್ಲಿ ಜನರನ್ನು ಕಾಡುವ " 100 ವ್ಯಕ್ತಿಗಳ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್‌ನ ಕಿಂಗ್‌ಖಾನ್ ಶಾರುಖ್ ಖಾನ್ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಸ್ತುತ ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ 65.6 ಪಾಯಿಂಟ್ ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ಅದೇ ವೇಳೆ 45.3 ಪಾಯಿಂಟ್ ಗಳಿಸಿಕೊಂಡು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ದ್ವಿತೀಯ ಸ್ಥಾನದಲ್ಲಿದ್ದಾರೆ.

23.98 ಪಾಯಿಂಟ್ ಗಳಿಸಿಕೊಂಡು ಸಚಿನ್ ತೆಂಡೂಲ್ಕರ್ 68ನೇ ಸ್ಥಾನ ಗಳಿಸಿಕೊಂಡರೆ 22.07 ಪಾಯಿಂಟ್ ಗಳಿಸಿದ ಶಾರುಖ್ ಖಾನ್ 99ನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ 22.08 ಪಾಯಿಂಟ್ ಗಳಿಸಿಕೊಂಡು 98ನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದಂತೆ ಗಾಯಕಿ ಮೆಡೋನ್ನಾ (3ನೇ ಸ್ಥಾನ), ಬಿಯೋನ್ಸ್ (4), ಅಮೆರಿಕದ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ (11), ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ (27), ಸೆರ್ಬಿಯಾದ ಟೆನಿಸ್ ಆಟಗಾರ ನೋವಕ್ ಜೊಕೋವಿಕ್ (61), ಪೋಪ್ ಫ್ರಾನ್ಸಿಸ್ (70), ಫಾರ್ಮುಲಾ ಒನ್ ಡ್ರೈವರ್ ಮೈಕಲ್ ಶೂಮಾಕರ್ (77) ಮತ್ತು ಓರ್ಫಾ ವಿನ್‌ಫ್ರೇ 95ನೇ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement