ಜೂನ್ 12ರಿಂದ ಏರ್ ಏಷ್ಯಾ ಇಂಡಿಯಾ ವಿಮಾನಯಾನ ಆರಂಭ
ಜೂನ್ 13ಕ್ಕೆ ಏರ್ ಏಷ್ಯಾ ಇಂಡಿಯಾ ವಿಮಾನ ಯಾನ ಆರಂಭಿಸಲಿದೆ ಎಂದು ಮಲೇಷ್ಯನ್ ವಿಮಾನಯಾನ ..
ನವದೆಹಲಿ: ಜೂನ್ 13ಕ್ಕೆ ಏರ್ ಏಷ್ಯಾ ಇಂಡಿಯಾ ವಿಮಾನ ಯಾನ ಆರಂಭಿಸಲಿದೆ ಎಂದು ಮಲೇಷ್ಯನ್ ವಿಮಾನಯಾನ ಸಂಸ್ಥೆಯ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್ ಟಾನಿ ಫೆರ್ನಾಂಡಿಸ್ ಹೇಳಿದ್ದಾರೆ.
ನಾಳೆ (ಶುಕ್ರವಾರ) ದಿಂದಲೇ ಟಿಕೆಟ್ ಮಾರಾಟ ಆರಂಭಗೊಳ್ಳಲಿದೆ ಎಂದು ಫೆರ್ನಾಂಡಿಸ್ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.
ಕಡಿಮೆ ದರದ ವಿಮಾನ ಪ್ರಯಾಣ ಕಲ್ಪಿಸುವ ಏರ್ ಏಷ್ಯಾ ವಿಮಾನ ಈ ತಿಂಗಳಲ್ಲಿ ಭಾರತದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಗಿಟ್ಟಿಸಿಕೊಂಡಿತ್ತು. ಈ ಯೋಜನೆಯಲ್ಲಿ ಭಾರತದ ಟಾಟಾ ಗ್ರೂಪ್ ಮತ್ತು ಟೆಲೆಸ್ಟ್ರಾ ಟ್ರೇಡ್ಪ್ಲೇಸ್ ಏರ್ ಏಷ್ಯಾದ ಸಹಭಾಗಿತ್ವ ಹೊಂದಿದ್ದಾರೆ.