ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅಧಿಕಾರ ಸ್ವೀಕಾರ

ಹಿರಿಯ ಟಿಡಿಪಿ ನಾಯಕ ಪಸುಪತಿ ಅಶೋಕ್ ಗಜಪತಿ ರಾಜು...

Rashmi Kasaragodu
Updated On : 29 May 2014, 3:07 am

ನವದೆಹಲಿ: ಹಿರಿಯ ಟಿಡಿಪಿ ನಾಯಕ ಪಸುಪತಿ ಅಶೋಕ್ ಗಜಪತಿ ರಾಜು ಅವರು ಗುರುವಾರ ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಸಚಿವರು ವಿಮಾನಯಾನ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಸದ್ಯ, ನಷ್ಟದಲ್ಲಿರುವ ವಿಮಾನಯಾನ ಖಾತೆಯ ಬಗ್ಗೆ ಹೇಗೆ ಸಂಭಾಳಿಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಷ್ಟವುಂಟಾಗಲು ಕಾರಣ ಏನೆಂಬುದನ್ನು ನಾನು ಮೊದಲು ಪರಿಶೀಲಿಸುತ್ತೇನೆ. ಅನಂತರವೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

ರಾಜು ಅವರು ಈಗಾಗಲೇ  ನಾಗರಿಕ ವಿಮಾನಯಾನ ಕಾರ್ಯದರ್ಶಿ ಅಶೋಕ್ ಲಾವಾಜಾ, ಏರ್ ಇಂಡಿಯಾ ಸಿಎಂಡಿ  ರೋಹಿತ್ ನಂದನ್, ನಾಗರಿಕ ವಿಮಾನಯಾನದ ಡೈರೆಕ್ಟರ್  ಜನರಲ್ ಪ್ರಭಾತ್ ಕುಮಾರ್ ಮತ್ತು ಏರ್‌ಪೋರ್ಟ್ಸ್ ಇಕಾನಾಮಿಕ್ ರೆಗ್ಯುಲೇಟರಿ ಅಥಾರಿಟಿ ಚೇರ್‌ಮನ್ ಯಶ್ವಂತ್ ಭಾವೆ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಆಂಧ್ರ ಪ್ರದೇಶದ ವಜಿಯಾನಗರಂ ಮೂಲದ 63ರ ಹರೆಯದ ರಾಜು 7 ಬಾರಿ ಶಾಸಕರಾಗಿದ್ದು ಎನ್‌ಟಿ ರಾಮರಾವ್ ಮತ್ತು ಎನ್ ಚಂದ್ರಬಾಬು ನಾಯ್ಡು ಅವರ ಸರ್ಕಾರದಲ್ಲಿ ವಿತ್ತ ಹಾಗು ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement