ಮೋದಿಗೆ ಕರೆ ಮಾಡಿ ಶುಭ ಹಾರೈಸಿದ ಚೀನಾ ಪ್ರಧಾನಿ
ಚೀನಾದ ಪ್ರಧಾನಿ ಲೀ ಕೇಪಿಯಾಂಗ್ ಗುರುವಾರ ನೂತನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ...
ನವದೆಹಲಿ: ಚೀನಾದ ಪ್ರಧಾನಿ ಲೀ ಕೇಪಿಯಾಂಗ್ ಗುರುವಾರ ನೂತನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ.
ಉಭಯ ರಾಷ್ಟ್ರದ ಪ್ರಧಾನಿಗಳು ಫೋನ್ ಮೂಲಕವೇ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.
ಮೋದಿ ಪ್ರಧಾನಿಯಾದ ನಂತರ ವಿದೇಶದಿಂದ ಫೋನ್ ಮಾಡಿ ಮೊದಲ ಪ್ರಧಾನಿಯಾಗಿದ್ದಾರೆ ಲೀ. ಮೋದಿಯವರಿಗೆ ಶುಭ ಹಾರೈಸಿದ ಲೀ, ಉಭಯ ರಾಷ್ಟ್ರಗಳ ನಡುವಿನ
ಸಂಬಂಧವನ್ನು ಗಟ್ಟಿಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಸುಮಾರು 25 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಮೋದಿಯವರು ಚೀನಾ ಯಾವತ್ತೂ ಭಾರತದ ವಿದೇಶಾಂಗ ನೀತಿಗೆ ಆದ್ಯತೆ ನೀಡಿದೆ ಎಂದಿದ್ದಾರೆ.
ಅದೇ ವೇಳೆ ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಸಂಬಂಧವನ್ನು ಇನ್ನಷ್ಟು ಪಕ್ವಗೊಳಿಸುವ ವಿಚಾರಗಳನ್ನು ಮೋದಿ ಸ್ವಾಗತಿಸಿದ್ದಾರೆ.