ಅತ್ಯಾಚಾರಕ್ಕೊಳಗಾದ ಯುವತಿಯ ಅಮ್ಮನ ಮೇಲೆ ಹಲ್ಲೆ
ಉತ್ತರಪ್ರದೇಶದ ಇತ್ವಾ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಾದ ಯುವತಿಯ ಅಮ್ಮನ ಮೇಲೆ ಅತ್ಯಾಚಾರ ಪ್ರಕರಣದ ...
ನವದೆಹಲಿ: ಉತ್ತರಪ್ರದೇಶದ ಇತ್ವಾ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಾದ ಯುವತಿಯ ಅಮ್ಮನ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿ ಬಸಂತ್ ಯಾದವ್ರ ಅಪ್ಪ ಸೇರಿದಂತೆ ಇನ್ನಿತರ ಮೂರು ಮಂದಿ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಊರಿನಲ್ಲಿಯೇ ಈ ಘಟನೆ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯ ವಿಕಾಸ್ ಯಾದವ್ ಹೇಳಿದ್ದಾರೆ.
ಆಕೆಯ ಮೇಲೆ ಮೂವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮೊದಲು ತನಿಖೆ ಮಾಡಿ ಅನಂತರ ಅವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಇತ್ವಾ ಜಿಲ್ಲೆಯ ಎಸ್ಎಸ್ಪಿ ದಿನೇಶ್ ಕುಮಾರ್ ಹೇಳಿದ್ದಾರೆ.