ಗರ್ಭಿಣಿಗೆ ಕಲ್ಲೆಸೆದು ಹತ್ಯೆಗೈದ ಪ್ರಕರಣ: ತನಿಖೆಗೆ ಆದೇಶ
ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬಳನ್ನು ಲಾಹೋರ್ ಹೈಕೋರ್ಟ್ನ ಹೊರಗೆ ಕಲ್ಲೆಸೆದು ಪೈಶಾಚಿಕವಾಗಿ ಹತ್ಯೆಗೈದ ...
ಇಸ್ಲಾಮಾಬಾದ್: ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬಳನ್ನು ಲಾಹೋರ್ ಹೈಕೋರ್ಟ್ನ ಹೊರಗೆ ಕಲ್ಲೆಸೆದು ಪೈಶಾಚಿಕವಾಗಿ ಹತ್ಯೆಗೈದ ಘಟನೆಯ ಬಗ್ಗೆ ಶೀಘ್ರ ತನಿಖೆ
ಕೈಗೊಳ್ಳಬೇಕೆಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಲಾಹೋರ್ ಹೈಕೋರ್ಟ್ನ ಹೊರಗೆ 25ರ ಹರೆಯದ ಫರ್ಜಾನಾ ಪರ್ವೀನ್ ಎಂಬಾಕೆಯನ್ನು ಕಲ್ಲೆಸೆದು ಹತ್ಯೆಗೈಯ್ಯಲಾಗಿತ್ತು. ಈಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ತಮ್ಮ ಇಚ್ಛೆಯನ್ನು ಕಡೆಗಣಿಸಿ ಇನ್ನೊಬ್ಬನನ್ನು ಮದುವೆಯಾಗಿದ್ದಕ್ಕಾಗಿ ಆಕೆಯ ಅಪ್ಪ, ಸಹೋದರು ಮತ್ತು ಆಕೆಯನ್ನು ವಿವಾಹವಾಗಬೇಕಿದ್ದ ಹುಡುಗ ಎಲ್ಲರೂ ಸೇರಿ ಇಟ್ಟಿಗೆಯ ತುಂಡುಗಳನ್ನೆಸೆದು ಹತ್ಯೆಗೈದಿದ್ದರು.
ತನ್ನ ಹೆಂಡತಿಯನ್ನು ರಕ್ಷಿಸಿ ಎಂದು ಅಂಗಾಲಾಚಿದರೂ ಯಾರೊಬ್ಬರೂ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಫರ್ಜಾನಾಳ ಪತಿ ಹೇಳಿದ್ದಾರೆ.
ಹತ್ಯೆಗೈದ ನಂತರ ಪೊಲೀಸರಿಗೆ ಶರಣಾದ ಪರ್ಜಾನಾಳ ಅಪ್ಪ, ನಾನು ಈ ಕೃತ್ಯ ಮಾಡಿರುವ ಬಗ್ಗೆ ನನಗೆ ವಿಷಾದವಿಲ್ಲ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಗಳನ್ನು ಈವರೆಗೆ ಬಂಧಿಸಿಲ್ಲ.
ಪ್ರಸ್ತುತ ಘಟನೆಯ ಬಗ್ಗೆ ಶೀಘ್ರ ತನಿಖೆ ಕೈಗೊಳ್ಳುವಂತೆ ತಾನು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯವರಿಗೆ ಆದೇಶಿಸಿದ್ದೇನೆ ಎಂದು ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.