ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಾಲ ಮಾಡಿಯಾದ್ರೂ ಮನೆ ಕಟ್ಟಿ

'ಮನೆ ಕಟ್ಟಿ ನೋಡು. ಮದುವೆ ಮಾಡಿ ನೋಡು' ಎಂದು ಹೇಳಿದ್ದು. ಬರೀ ಮಾತಲ್ಲ.

Lingaraj Badiger
Updated On : 30 May 2014, 12:43 pm

'ಮನೆ ಕಟ್ಟಿ ನೋಡು. ಮದುವೆ ಮಾಡಿ ನೋಡು' ಎಂದು ಹಿರಿಯರು ಹೇಳಿದ್ದು. ಬರೀ ಮಾತಲ್ಲ. ಅದೊಂದು ಸವಾಲು ಕಟ್ಟಲೇಬೇಕೆಂಬ ಜರೂರತ್ತಿದ್ದರೆ ಅದೆಷ್ಟರ ಮಾತು ಎಂದು ಹುಂಬ ಧೈರ್ಯ ತೋರಿದವರು ಕೂಡ. ಅಖಾಡಕ್ಕೆ ಧುಮುಕಿದ ಮೇಲೆ ಸಪ್ಪೆ ಸಾರಾಗಿಬಿಡುತ್ತಾರೆ. ಇಡೀ ವಿಶ್ವದ ಅಷ್ಟೂ ಸಮಸ್ಯೆಯೂ ತಮಗೊಬ್ಬರಿಗೇ ಬಂದಂತೆ. ಬದಲಾದ ವಿದ್ಯಮಾನಗಳಷ್ಟೂ ತಮ್ಮನ್ನು ಮಣಿಸಲೆಂದೇ ಕೆಣಕಲೆಂದೇ ಕಂಕಣ ಕಟ್ಟಿ ನಿಂತಂತೆ ಅಧೀರರಾಗುತ್ತಾರೆ. ಸಾಲವೆಂಬುದು ಶೂಲವೆಂಬಂತೆ ಎನ್ನುವ ಗಾದೆ ಗಡಿ ಪಾರಾಗುವುದೇ ಅಂತಹ ಹೊತ್ತಿನಲ್ಲಿ ಸಾಲದೆಂಬಂತೆ ಬ್ಯಾಂಕು ಹಣಕಾಸು ಸಂಸ್ಥೆಗಳೆಲ್ಲಾ ದಿನಬೆಳಗಾದರೆ 'ಸಾಲ ಕೊಡ್ತೀವಿ ತೊಗೋತೀರಾ' ಎನ್ನುವ ಆಮಿಷ ಒಡ್ಡುತ್ತಲೇ ಕೆರಳಿಸುತ್ತಿರುತ್ತದೆ. ಹಸಿದು ಕಂಗೆಟ್ಟವನ ಮುಂದೆ ಊಟವಿಕ್ಕಿ, ಸುಮ್ಮನೆ ನೋಡು ತಿನ್ನಬೇಡ ಎಂದರೆ ಏನಾಗಬಹುದೋ ಮನೆ ಕಟ್ಟುವ ಕನಸಿದ್ದವರದೂ ಅದೇ ಪರಿಸ್ಥಿತಿ ಯಾರು ಏನೇ ಅನ್ನಲಿ. ಊರೇ ಹಾಳಾಗಲಿ ತೆರಿಗೆ ಇಲಾಖೆಯ ಮರ್ಜಿ ಗೃಹಸಾಲ ಪಡೆದವರ ಮೇಲಿದೆ. ಈ ತೆರಿಗೆ ವಿನಾಯಿತಿ ರಿಯಾಯಿತಿ ಪ್ರಮಾಣ ಆಧಾರ ಇವೆಲ್ಲಾ ಅರ್ಥವಾಗದೆ ಬೇಸತ್ತವರಿಗೆ ಇದು ಸುಲಭವಾಗಿ ಅರ್ಥಮಾಡಿಸುವ ಪ್ರಯತ್ನ.
ಮನೆ ಕಟ್ಟಿ ಮನೆ ಕಟ್ಟಿ ನಮ್ಮದು ಅಂತ ಸ್ವಂತ ಸೂರಿದ್ದರೆ, ಉಪ್ಪೋ ಗಂಜೀನೋ ಕುಡ್ಕೊಂಡು ನೆಮ್ಮದಿಯಿಂದಿರಬಹುದು ಎಂದು ದಿನಾ ಏಳೋ ಮುಂಚೆ ಎದ್ದಾಗ ಮೇಲೆ ಊಟಕ್ಕೆ ಮುಂಚೆ ಊಟ ಆದ ಮೇಲೆ ಮಲಗುವ ಮುನ್ನ ಮಲಗಿದ ಮೇಲೆ ಅರ್ಧರಾತ್ರಿ ಎಬ್ಬಿಸಿ ಹೆಂಡತಿ ವರಾತ ತೆಗೀತಿದ್ದಾಳೆ ಅಂತ ವರಿ ಮಾಡ್ಕೋಬೇಡಿ. ಈ ಪರಿ ತಿಳಿದುಕೊಂಡ್ರೆ ತೆರಿಗೆ ಪಿರಿ ಪಿರಿಯಲ್ಲ. ಮನೆಯ ಕನಸು ಕೆಟ್ಟದ್ದೇನಲ್ಲ.
ಓವರ್ ಟು ಆದಾಯ ತೆರಿಗೆ ಕಾಯ್ದೆ!
1. ಇಎಂಐ ಪ್ಲ್ಯಾನ್ ಪ್ರಕಾರ ಗೃಹಸಾಲವನ್ನು ಪಡೆದು, ಮರುಪಾವತಿಸುವುದರಿಂದ ಆಗುವ ತೆರಿಗೆ ಪ್ರಯೋಜನಗಳೇನು?
ಪ್ರಸಕ್ತ ವರ್ಷದಲ್ಲಿ ನೀವು ತೀರಿಸಿದ ಅಸಲು ಹಾಗೂ ಬಡ್ಡಿಯನ್ನು ತೆರಿಗೆ ವ್ಯಾಪ್ತಿಯಿಂದ ಹೀಗೆ ಹೊರಪಡಿಸಬಹುದು.
ಪರಿಚ್ಛೇದ (ಸೆಕ್ಷನ್) 24ರ ಅನ್ವಯ ನಈ ವರ್ಷ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. ಈ ರೀತಿಯ ಕಳೆಯುವಿಕೆ ಸದ್ಯ ನೀವು ಪಾವತಿಸಿರುವ ಬಡ್ಡಿ ಅಥವಾ ರೂ 1,50,000ರದ ಮಿತಿಗೆ ಒಳಪಟ್ಟಿರುತ್ತದೆ ಅಂದರೆ ಇನ್ನೆರಡರಲ್ಲಿ ಕನಿಷ್ಟ ವಾರ್ಷಿಕ ರೂ 1,50,000ಕ್ಕಿಂತ ಹೆಚ್ಚಿನ ಬಡ್ಡಿಯ ಮೇಲೆ ಈ ಸೌಲಭ್ಯವಿರುವುದಿಲ್ಲ.
ಸದ್ಯ ಪಾವತಿಸುವ ಬಡ್ಡಿ ್ಢ್ಢ್ಢ ಕ ಇವೆರಡರಲ್ಲಿ
ಅಥವಾ ಕನಿಷ್ಟ
ಗರಿಷ್ಠ ಮಿತಿ ರೂ.150000
ಪರಿಚ್ಛೇದ 80ಸಿಯ ಅಡಿಯಲ್ಲಿ ಅಸಲಿನ ಮೇಲೆ ಕಳೆಯುವಿಕೆಯನ್ನು ಗರಿಷ್ಠ ರೂ 1,00,000ದವರೆಗೂ ಪಡೆಯಬಹುದಾಗಿದೆ. 80 ಸಿ ಅಡಿಯಲ್ಲಿ ಬರುವ ಎಲ್ಲಾ ಹೂಡಿಕೆಗಳೂ ರೂ.1,00,000ದ ಮಿತಿಗೆ ಒಳಪಟ್ಟಿದೆ.
ಸಾಲ ನೀಡಿರುವ ವ್ಯಕ್ತಿ 1 ಸಂಸ್ಥೆಯಿಂದ ಅಸಲು ಹಾಗೂ ಬಡ್ಡಿಯನ್ನು ಪಾವತಿಸಿದ ಕುರಿತು ಪ್ರಮಾಣವನ್ನು ಪಡೆದು ಸಲ್ಲಿಸಬೇಕಾಗುತ್ತದೆ. ಈ ವರ್ಷ ನೀವು ಪಾವತಿಸಿರುವ ಅಸಲು ಹಾಗೂ ಬಡ್ಡಿಯನ್ನು ಪ್ರತ್ಯೇಕವಾಗಿ ಸೂಚಿಸುವ ಪ್ರಮಾಣಪತ್ರವನ್ನು ಪಡೆಯುವುದು ಅವಶ್ಯಕ.

2. ಗಂಡ ಹೆಂಡತಿ ಜೊತೆಯಾಗಿ ಜಂಟಿ ಗೃಹಸಾಲವನ್ನು ಪಡೆದಿದ್ದರೆ ಇಬ್ಬರೂ ಕಳೆಯುವಿಕೆಯನ್ನು ಬಳಸಿಕೊಳ್ಳಬಹುದೆ?
ಹೌದು, ಹೆಂಡತಿಯು ಸಂಪಾದಿಸುತ್ತಿದ್ದು ಪ್ರತ್ಯೇಕ ಆದಾಯ ಮೂಲವನ್ನು ಹೊಂದಿದ್ದರೆ, ಇಬ್ಬರೂ ಕೂಡ ಕಳೆಯುವಿಕೆಯ ಸೌಲಭ್ಯ ಪಡೆಯಬಹುದು. ಅಸಲಿನ ಮರುಪಾವತಿ ಮೊತ್ತವನ್ನು ಗರಿಷ್ಟ 1 ಲಕ್ಷದ ಮತಿಗೆ ಒಳಪಟ್ಟು ಪರಿಚ್ಛೇದ 80ಸಿಯ ಅಡಿಯಲ್ಲಿ ಗಂಡ ಹಾಗೂ ಹೆಂಡತಿಯು ಪ್ರತ್ಯೇಕವಾಗಿ ಕಳೆಯುವಿಕೆಗೆ ಒಳಪಡಿಸಬಹುದಾಗಿದೆ.
ಒಂದು ವೇಳೆ ಮನೆಯ ವಾರಸುದಾರ/ಮಾಲೀಕ ಒಬ್ಬರಿಗಿಂತ ಹೆಚ್ಚಿದ್ದರೆ ಹಾಗೂ ಮನೆಯಲ್ಲಿ ಮಾಲೀಕರೆಲ್ಲರೂ ವಾಸಿಸುತ್ತಿದ್ದರೆ ಪ್ರತಿಯೊಬ್ಬ ಸಹ ಮಾಲೀಕನೂ ಸಾಲದ ಮೇಲಿನ ಬಡ್ಡಿಯನ್ನು ಗರಿಷ್ಟ ರೂ. 150000ರದ ಮಿತಿಗೆ ಒಳಪಡಿಸಿ ಕಳೆಯುವಿಕೆಗೆ ಆಗ್ರಹಿಸಬಹುದು. ಮನೆಯನ್ನು ಬಾಡಿಗೆಗೆ ಬಿಟ್ಟಿದ್ದರೆ ಈ ಮಿತಿಯು ಅನ್ವಯವಾಗುವುದಿಲ್ಲ. ಆಗ ಪ್ರತಿ ಸಹ ಮಾಲೀಕನೂ ತಮ್ಮ ಮಾಲೀಕತ್ವದ ಅನುಪಾತದಲ್ಲಿ ಕಡಿತವನ್ನು ಕೋರಬಹುದು.
3. ನಾನು ಮತ್ತು ನನ್ನ ಗಂಡ ಜಂಟಿಯಾಗಿ ಮನೆಸಾಲ ತೆಗೆದುಕೊಂಡಿದ್ದೇವೆ ನನ್ನ ಗಂಡ ಶೇಕಡ 75ರಷ್ಟು ಇಎಂಐ ಅನ್ನು ಪಾವತಿಸುತ್ತಾರೆ. ನಮ್ಮಿಬ್ಬರಿಗೂ ಪ್ರತ್ಯೇಕವಾಗಿ ಲಭಿಸುವ ತೆರಿಗೆ ಸೌಲಭ್ಯಗಳೇನು?
ನೀವು ಜಂಟಿಯಾಗಿ ಗೃಹ ಸಾಲವನ್ನು ಪಡೆದಿರುವುದರಿಂದ ನೀವು ಪಾವತಿಸಿರುವ ಇಎಂಐ ಮೊತ್ತವು ತೆರಿಗೆ ವಿನಾಯಿತಿಗೆ ಅರ್ಹವಾಗುತ್ತದೆ. ಅಂದರೆ ನೀವಿಬ್ಬರು ಮರುಪಾವತಿಸಿರುವ ಮೊತ್ತದ ಅನುಪಾತಕ್ಕೆ ಅನುಗುಣವಾಗಿ ತೆರಿಗೆ ವಿನಾಯಿತಿ ದೊರೆಯುತ್ತದೆ. ನೀವು ತೆರಿಗೆಗೆ ಒಳಪಡುವ ಆದಾಯ ಕಡಿತ ಸೌಲಭ್ಯ ಪಡೆಯುವಾಗ ಅಸಲು ಹಾಗೂ ಬಡ್ಡಿಯನ್ನು ವಿಂಗಡಿಸಿ, ಅಸಲು ಮರುಪಾವತಿಯನ್ನು ಪರಿಚ್ಛೇದ 80ಸಿ ಅನ್ವಯ (ಗರಿಷ್ಟ 1,00,000 ರೂ ಮಿತಿಗೆ ಒಳಪಟ್ಟು) ಹಾಗೂ ಬಡ್ಡಿಯನ್ನು ಪರಿಚ್ಛೇದ 24ರ ಅನ್ವಯ ಗೃಹ ಮೂಲದಿಂದ ಬಂದ

ನಿಮ್ಮ ಉದಾಹರಣೆಯಲ್ಲಿ ಅಸಲು ಮರುಪಾವತಿಯ ಹಣವನ್ನು ತಲಾ ರೂ1,00,000ದ ಮಿತಿಗೆ ಒಳಪಟ್ಟು ಪ್ರತ್ಯೇಕವಾಗಿ ತೆರಿಗೆ ವಿನಾಯಿತಿ ಪಡೆಯಬಹುದು ಹಾಗೂ ನೀವು ಅದೇ ಮನೆಯಲ್ಲಿ ವಾಸವಿದ್ದರೆ ಬಡ್ಡಿ ಮರುಪಾವತಿಯ ಮೊತ್ತವನ್ನು 3:1ರ ಅನುಪಾತದಲ್ಲಿ (ತಲಾ ರೂ.1,50,000 ಮಿತಿಗೆ ಒಳಪಟ್ಟು) ಕಳೆಯುವಿಕೆಗೆ ಕೋರಬಹುದು.
ನೀವು ಆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಯಾವುದೇ ಮಿತಿಯು ಅನ್ವಯವಾಗುವುದಿಲ್ಲ. ಆ ವರ್ಷ ಮರುಪಾವತಿಸಿದ ಬಡ್ಡಿ ಮೊತ್ತವನ್ನು 3:1ರ ಅನುಪಾತದಲ್ಲಿ ಕಳೆಯುವಿಕೆಗೆ ಆಗ್ರಹಿಸಬಹುದು.
4. ನಾನು ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ಸಾಲ ಪಡೆದು ಮನೆಯನ್ನು ಖರೀದಿಸುವ ಯೋಚನೆ ಹೊಂದಿದ್ದೇನೆ. ತೆರಿಗೆ ಸೌಲಭ್ಯಗಳು ಈ ವಿಚಾರದಲ್ಲಿ ಹೇಗಿರುತ್ತದೆ?
ನೀವು ಸ್ನೇಹಿತರು ಹಾಗೂ ಬಂಧುಗಳಿಗೆ ಪಾವತಿಸಿರುವ ಬಡ್ಡಿಯನ್ನು ಪರಿಚ್ಛೇದ 24ರ ಅನ್ವಯ ತೆರಿಗೆಗೆ ಒಳಪಡುವ ಗೃಹ ಮೂಲದ ಆದಾಯದಿಂದ ಕಡಿತ/ಕಳೆಯುವಿಕೆಗೆ ಆಗ್ರಹಿಸಬಹುದು. ಆದರೆ ಹಾಗೆ ಬಡ್ಡಿ ಪಾವತಿಸಿರುವ ಕುರಿತು ಪ್ರಮಾಣಪತ್ರವಿಲ್ಲದಿದ್ದರೆ, ಈ ಸೌಲಭ್ಯ ಹೊಂದಲಾಗುವುದಿಲ್ಲ, ಬಡ್ಡಿಯನ್ನು ಸ್ವೀಕರಿಸಿದ ವ್ಯಕ್ತಿಯು ಆ ಹಣವನ್ನು ಇತರೆ ಮೂಲಗಳಿಂದ ಬಂದ ಆದಾಯದ ಅಡಿಯಲ್ಲಿ ತೆರಿಗೆ ವ್ಯಾಪ್ತಿಗೆ ಸೇರಿಸಿಕೊಂಡು ತೆರಿಗೆ ಪಾವತಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಸಾಲಗಾರನು ಅಸಲನ್ನು ಯಾವುದೇ ಪರಿಚ್ಛೇದದ ಅಡಿಯಲ್ಲಿ ಕಳೆಯುವಿಕೆಗೆ ಆಗ್ರಹಿಸಲಾಗುವುದಿಲ್ಲ ಕೇವಲ ಅಂಗೀಕೃತ ಬ್ಯಾಂಕು ಹಾಗೂ ಸಂಸ್ಥೆಗಳಿಂದ ಪಡೆದ ಸಾಲದ ಅಸಲು ಹಾಗೂ ಬಡ್ಡಿ ಕಳೆಯುವಿಕೆಗೆ ಅರ್ಹವಾಗುತ್ತದೆ.
5. ನಾನು ಒಂದೇ ಬಾರಿಗೆ ಗೃಹಸಾಲ ಹಾಗೂ ಬಾಡಿಗೆ ಭತ್ಯೆ ಕುರಿತಾಗಿ ಇರುವ ತೆರಿಗೆ ಸೌಲಭ್ಯ ಪಡೆಯಬಹುದೆ?
ನೀವು ಗೃಹ ಸಾಲವನ್ನು ಪಡೆದ ಮೇಲೆಯೂ ಬಾಡಿಗೆ ಮನೆಯಲ್ಲಿ ವಾಸವಿದ್ದರೆ. ಈ ಕೆಳಕಂಡ ತೆರಿಗೆ ಸೌಲಭ್ಯಗಳಿಗೆ ಭಾಜನರಾಗಬಹುದು.
1. ಮೊದಲು ಮರುಪಾವತಿಯ ಮೇಲಿರುವ ತೆರಿಗೆ ಸೌಲಭ್ಯದ ಪ್ರಕಾರ 1,50, 000 ವರೆಗೆ.
2. ಬಡ್ಡಿ ಪಾವತಿಯ ಮೇಲೆ ತೆರಿಗೆ ಸೌಲಭ್ಯ (ಪರಿಚ್ಛೇದ 24)
3. ಮನೆ ಬಾಡಿಗೆ ಭತ್ಯೆ ಸೌಲಭ್ಯ
ಆ ಆರ್ಥಿಕ ವರ್ಷದಲ್ಲಿ ನಿಮ್ಮ ಮನೆಯು ವಾಸ ಯೋಗ್ಯವಾಗಿದ್ದರೆ ಮಾತ್ರ ಗೃಹ ಸಾಲದ ಮೇಲಿರುವ ತೆರಿಗೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಗೃಹ ನಿರ್ಮಾಣ ಕಾರ್ಯವು ಮುಗಿದಿದ್ದರೆ, ಮನೆ ಬಾಡಿಗೆ ಭತ್ಯೆಯ ಸೌಲಭ್ಯ ಸ್ಥಗಿತಗೊಳ್ಳುತ್ತದೆ. ನೀವು ಸಾಲ ಪಡೆದು ಗೃಹ ನಿರ್ಮಾಣವನ್ನು ಪೂರ್ಣಗೊಳಿಸಿ ಆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಮೇಲೆ ಸೂಚಿಸಿದ ಮೂರು ಸೌಲಭ್ಯಗಳಿಗೂ ಅರ್ಹರಾಗುತ್ತೀರಿ. ಆದರೆ ಆ ಸಂದರ್ಭದಲ್ಲಿ ನೀವು ಪಡೆದ ಬಾಡಿಗೆಯನ್ನು ತೆರಿಗೆಗೆ ಒಳಪಡುವ ಆದಾಯದಲ್ಲಿ ಸೇರಿಸಿಕೊಳ್ಳಲಾಗುತ್ತದೆ.
6. ನಾನು ಗೃಹ ಸಾಲವೊಂದಕ್ಕೆ ಸಹ ಅರ್ಜಿದಾರ ಆದರೆ ಪೂರ್ತಿ ಇಎಂಐಅನ್ನು ನಾನೊಬ್ಬನೇ ಪಾವತಿಸುತ್ತಿದ್ದೇನೆ. ಪೂರ್ಣ ಪ್ರಮಾಣದ ತೆರಿಗೆ ವಿನಾಯಿತಿಯನ್ನು ನಾನು ಹೇಗೆ ಪಡೆಯಬಹುದು?
ನೀವು ಸಹ ಮಾಲೀಕರಾಗಿರುವವರೆಗೂ ಆದಾಯ ತೆರಿಗೆ ವಿನಾಯಿತಿಯನ್ನು ಸಹ ಅರ್ಜಿದಾರನಾಗಿ ಪಡೆಯಬಹುದು. ನೀವೋಬ್ಬರೇ ಪೂರ್ಣ ಪ್ರಮಾಣದ ಇಎಂಐ ಪಾವತಿಸುತ್ತಿದ್ದಲ್ಲಿ ಪೂರ್ಣ ತೆರಿಗೆ ಸೌಲಭ್ಯವನ್ನು ನೀವೊಬ್ಬರೇ ಪಡೆಯಬಹುದು.ಇದಕ್ಕಾಗಿ ನೀವು ಮಾತ್ರವೇ ಪೂರ್ಣ ಸಾಲವನ್ನು ತೀರಿಸುತ್ತಿರುವುದಾಗಿ ಸಹ ಸಾಲಗಾರರೊಂದಿಗೆ ಸಣ್ಣ ಕರಾರೊಂದನ್ನು ಮಾಡಿಕೊಳ್ಳಬೇಕಾಗುತ್ತದೆ. ಒಂದು ಪಕ್ಷ ನೀವು ಸಾಲದಲ್ಲಿನ ಪಾಲೊಂದನ್ನು ತೀರಿಸುತ್ತಿದ್ದರೆ ತೆರಿಗೆ ಸೌಲಭ್ಯವು ಆ ಪಾಲಿನ ಮಿತಿಗೆ ಒಳಪಟ್ಟಿರುತ್ತದೆ.
7. ನಾನು ಎರಡು ಭಿನ್ನ ಪ್ರಾಪರ್ಟಿಯ ಮೇಲೆ ಪ್ರತ್ಯೇಕವಾಗಿ ಗೃಹಸಾಲ ಪಡೆದಿದ್ದೇನೆ. ಈ ಎರಡೂ ಸಾಲದ ಮೇಲೂ ತೆರಿಗೆ ರಿಯಾಯಿತಿ(ಟೋನ್ ರಿಬೇಟ್) ಸೌಲಭ್ಯವನ್ನು ಪಡೆಯಬಹುದು?
ಪರಿಚ್ಛೇದ 80ಸಿಯ ಅಡಿಯಲ್ಲಿ ಎರಡು ಸಾಲಗಳ ಮೇಲೂ ತೆರಿಗೆ ಸೌಲಭ್ಯ ಪಡೆಯಬಹುದು. ಎರಡು ಸಾಲಗಳಿಂದ ಸೇರಿ ರೂ 1,00,000ದವರೆಗೂ 80ಸಿಯ ಪ್ರಯೋಜನ ಪಡೆಯಬಹುದು.
ಗೃಹಸಾಲದ ಮೇಲೆ ಪಾವತಿಸಿದ ಬಡ್ಡಿಯನ್ನು ನೇರವಾಗಿ ಸಂಬಳ ಅಥವಾ ಬೇರೆ ಮೂಲದಿಂದ ಬಂದ ಆದಾಯದಲ್ಲಿ ಕಳೆಯುವಿಕೆಗೆ ಒಳಪಡಿಸಲಾಗುವುದಿಲ್ಲ. ಪ್ರತಿ ಪ್ರಾಪರ್ಟಿಯ ಮೇಲೂ ಗೃಹ ಮೂಲದಿಂದ ಬಂದ ಆದಾಯವನ್ನು ಲೆಕ್ಕಿಸಲಾಗುತ್ತದೆ. ಎರಡರಲ್ಲಿ ಯಾವೊಂದರಲ್ಲಾದರೂ ನಷ್ಟ ಕಂಡು ಬಂದರೆ, ಆ ನಷ್ಟವನ್ನು ಬೇರೆ ಭರ್ತಿ (ಸೆಟ್ ಆಫ್) ಮಾಡಲಾಗುತ್ತದೆ.
ಪರಿಚ್ಛೇದ 24ರ ಅಡಿಯಲ್ಲಿ, ನೀವು ವಾಸಿಸುತ್ತಿರುವ ಮನೆಗೆ ಸಂಬಂಧಿಸಿದ ಬಡ್ಡಿಯನ್ನು ರೂ. 1,50,000ದವರೆಗೂ ಕಳೆಯುವಿಕೆಗೆ ಒಳಪಡಿಸಬಹುದು. ಮತ್ತೊಂದು ಮನೆಗೆ ಸಂಬಂಧಿಸಿದ ಬಡ್ಡಿಗೆ ಯಾವುದೇ ಮಿತಿಯಿಲ್ಲದೆ ತೆರಿಗೆ ಪ್ರಯೋಜನ ಪಡೆಯಬಹುದು.
8. ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೇನೆ. 2008ರಲ್ಲಿ ಅರ್ಧ ನಿರ್ಮಾಣ ಪೂರೈಸಿದ ಫ್ಲಾಟ್ ಅನ್ನು ಖರೀದಿಸಲು ಗೃಹ ಸಾಲವನ್ನು ಪಡೆದುಕೊಂಡೆ. ಅದರ ನಿರ್ಮಾಣವು 2014ರಲ್ಲಿ ಪೂರ್ಣಗೊಳ್ಳುತ್ತದೆ. ಇಲ್ಲಿಯವರೆಗೂ ಯಾವುದೇ ತೆರಿಗೆ ಸೌಲಭ್ಯವನ್ನು ಆಗ್ರಹಹಿಸಿಲ್ಲ. ಇಲ್ಲಿಯ ತನಕ ಪಾವತಿಸಿದ ಸಾಲದ ಕಂತುಗಳ ಗತಿ ಏನು? ಅದನ್ನು ಕೂಡ ತೆರಿಗೆ ಸೌಲಭ್ಯ ಅಡಿಗೆ ಬರುವುದೆ?
1961ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಪ್ರಾಪರ್ಟಿಯನ್ನು ಸಾಲ ಪಡೆದು ವಶಪಡಿಸಿಕೊಂಡಾಗ ಅಥವಾ ನಿರ್ಮಿಸಿದಾಗ ಹಾಗೆ ವಶಪಡಿಸಿಕೊಳ್ಳುವ ಅಥವಾ ನಿರ್ಮಾಣ ಪೂರ್ಣಗೊಳ್ಳುವ ಮುಂಚಿನ ಅವಧಿಯಲ್ಲಿ ಪಾವತಿಸಿದ ಬಡ್ಡಿಯನ್ನು ವಶಪಡಿಸಿಕೊಂಡಾದ ಮೇಲೆ/ನಿರ್ಮಾಣ ಪೂರ್ಣಗೊಂಡ ಮೇಲೆ 5 ಸಮವಾದ ಕಂತುಗಳಲ್ಲಿ ಕಳೆಯುವಿಕೆಗೆ ಅವಕಾಶ ನೀಡಲಾಗುತ್ತದೆ.
ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ, ನೀವು ಇಲ್ಲಿಯ ತನಕ ಪಾವತಿಸಿರುವ ಅಸಲನ್ನು ಕಳೆಯುವಿಕೆಗೆ ಒಳಪಡಿಸಲಾಗುವುದಿಲ್ಲ. ಕೆಲಸ ಪಾರ್ಣಗೊಂಡು ಮನೆಯನ್ನು ನಿಮಗೆ ಹಸ್ತಾಂತರಿಸಿದ ನಂತರ ಪರಿಚ್ಛೇದ 24(ಬಿ) ಹಾಗೂ 80 ಸಿ ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು 1 ಪ್ರಯೋಜನಗಳನ್ನು ಬಳಸಿಕೊಳ್ಳಬಹುದು. ನೀವು 80 ಸಿ ಅಡಿಯಲ್ಲಿ ಒಟ್ಟಾರೆ 1 ಲಕ್ಷದ ಮಿತಿಯವರೆಗೂ ಕಳೆಯುವಿಕೆಯ ಉಪಯೋಗ ಪಡೆಯಬಹುದು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ನೀವು ಮರು ಪಾವತಿಸಿರುವ ಸಾಲಕ್ಕೆ ಯಾವುದೇ ತೆರಿಗೆ ಪ್ರಯೋಜನಗಳು ಲಭಿಸುವುದಿಲ್ಲ.
9. ಗೃಹಸಾಲದ ಮೇಲೆ ತೀರಿಸಿರುವ ಬಡ್ಡಿ ಕುರಿತಾಗಿ ಪರಿಚ್ಛೇದ 24 (ಬಿ) ಅಲ್ಲದೆ ಮತ್ತಿತರ ತೆರಿಗೆ ಪ್ರಯೋಜನಗಳಿವೆಯೆ?
ಆರ್ಥಿಕ ಸಚಿವರು ಹೊಸದೊಂದು ಪರಿಚ್ಛೇದವನ್ನು ಗೃಹಸಾಲದ ಅಡಿಯಲ್ಲಿ ಸೇರಿಸಿದ್ದಾರೆ. ಅದರಂತೆ ತೆರಿಗೆದಾರನು ಹೆಚ್ಚುವರಿ ಕಳೆಯುವಿಕೆಯ ಪ್ರಯೋಜನವನ್ನು 2014-15 ಹಾಗೂ 2015-16ನೇ ಸಾಲಿನಲ್ಲಿ ಪಡೆಯಬಹುದಾಗಿದೆ. ಈ ಪರಿಚ್ಛೇದದ ಉದ್ದೇಶವೇನೆಂದರೆ ಗೃಹ ಮಾಲೀಕತ್ವವನ್ನು ಹಾಗೂ ಸ್ಟೀಲ್, ಸಿಮೆಂಟ್, ಇಟ್ಟಿಗೆ, ಮರ ಇತ್ಯಾದಿ ಕಾರ್ಖಾನೆಗಳನ್ನು ಹಾಗೂ ಲಕ್ಷಾಂತರ ಗೃಹ ನಿರ್ಮಾಣ ಕಾರ್ಮಿಕರನ್ನು ಉತ್ತೇಜಿಸುವುದು.
ನೀವು ಗೃಹಸಾಲದ ಕುರಿತು ತಿಳಿದಿರಬೇಕಾದ ವಿಷಯಗಳು:
1. ಗೃಹ ಸಾಲಗಾರರು ಪರಿಚ್ಛೇದ 24 ಹಾಗೂ 80 ಸಿ ಅಡಿಯಲ್ಲಿ ತೆರಿಗೆ ಸೌಲಭ್ಯಗಳನ್ನು ಪಡೆಯಬಹುದು. ಮನೆಯ ಮಾಲೀಕನು ಈ ಸೌಲಭ್ಯಗಳಿಗಾಗಿ ಆಗ್ರಹಿಸಬಹುದು.
2. ಒಂದು ವೇಳೆ ಸಹ-ಮಾಲೀಕರಿದ್ದರೆ, ಸಹ ಸಾಲಗಾರರೆಲ್ಲರೂ
3. ಸಹ ಮಾಲೀಕನು ಸಹ ಸಾಲಗಾರನಲ್ಲದೆ ಹೋದಲ್ಲಿ ತೆರಿಗೆ ಸೌಲಭ್ಯಕ್ಕೆ ಅರ್ಹನಾಗುವುದಿಲ್ಲ. ಅಂತೆಯೇ ಸಹ ಸಾಲಗಾರನು ಸಹ ಮಾಲೀಕನಲ್ಲದೆ ಹೋದಲ್ಲಿ ತೆರಿಗೆ ಸೌಲಭ್ಯಕ್ಕೆ ಅರ್ಹನಲ್ಲ.
4. ಗೃಹ ನಿರ್ಮಾಣ ಸಂಸ್ಥೆಗಳು ಎಲ್ಲಾ ಸಹ ಮಾಲೀಕರನ್ನು ಸಹ ಸಾಲಗಾರರಾಗುವಂತೆ ನಿರ್ದೇಶಿಸುತ್ತವೆ. ಸಾಲ ನೀಡುವ ಸಂಸ್ಥೆಗಳು ಯಾರು ಯಾರು ಸಹ ಸಾಲಗಾರರಾಗ ಬಹುದೆಂದು ತಿಳಿಸುತ್ತವೆ.
5. ತೆರಿಗೆ ಸೌಲಭ್ಯವು ಸಹ ಮಾಲೀಕರು ಗೃಹ ಸಾಲ ಪಡೆದಿರುವ ಅನುಪಾತದಲ್ಲಿ ದೊರೆಯುತ್ತದೆ. ಆದ್ದರಿಂದ ಸಹ ಸಾಲಗಾರರು, ತಮ್ಮ ಸಾಲದಲ್ಲಿನ ಪಾಲನ್ನು ಕರಾರುವಕ್ಕಾಗಿ ಗುರುತಿಸಿದರೆ ತೆರಿಗೆ ಸೌಲಭ್ಯ ಪಡೆಯಬಹುದು.
6. ಗೃಹಸಾಲ ನೀಡಿದ ಸಂಸ್ಥೆಯಿಂದ ಅಸಲು ಹಾಗೂ ಬಡ್ಡಿಯ ಸ್ಪಷ್ಟ ವಿಭಜನೆಯನ್ನು ತೋರಿಸುವ ಪ್ರಮಾಣ ಪತ್ರವನ್ನು ಪಡೆಯಬೇಕು. ಇದು ತೆರಿಗೆ ಸೌಲಭ್ಯ ಪಡೆಯಲು ಅತ್ಯವಶ್ಯಕ.
7. ಕಳೆಯುವಿಕೆ ಎಂದರೆ ತೆರಿಗೆಗೆ ಒಳಪಡುವ ಆದಾಯದಲ್ಲಿನ ಕಡಿತ.
-ಪ್ರಸಾದ್ ರಾವ್
-9844523453
prasadrao_99@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement